ಫೆ. 1ರಂದು ಟೀ ಹೋಟೆಲ್‌‌‌ಗೆ ನುಗ್ಗಲಿರುವ ನರೇಂದ್ರ ಮೋದಿ ಆಂಡ್ ಪಟಾಲಂ

ನವದೆಹಲಿ, ಶನಿವಾರ, 25 ಜನವರಿ 2014 (13:27 IST)

PR
ಚಾಯಿವಾಲಾ ಎನ್ನುವ ಖ್ಯಾತಿ ಪಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅದರ ಲಾಭ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದೀಗ ಗಾಂಧಿನಗರದಲ್ಲಿರುವ ಟೀ ಹೋಟೆಲ್‌ಗೆ ಭೇಟಿ ನೀಡಿ ಜನರನ್ನು ಭೇಟಿಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ದೇಶಾದ್ಯಂತ ಫೆಬ್ರವರಿ 1 ರಂದು ಬಿಜೆಪಿ ನಾಯಕರಾದ ಸಂಸದರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿರುವ ಟೀ ಹೋಟೆಲ್‌ಗಳಿಗೆ ಭೇಟಿ ನೀಡಿ ಜನತೆಯನ್ನು ಭೇಟಿ ಮಾಡಲಿದ್ದಾರೆ.

ನರೇಂದ್ರ ಮೋದಿ ಟೀ ಹೋಟೆಲ್‌ನಿಂದಲೇ ಜನತೆಯೊಂದಿಗೆ ಮಾತನಾಡುವ ಬಗ್ಗೆ ಟೆಲಿವಿಜನ್ ಚಾನೆಲ್‌ಗಳು ನೇರ ಪ್ರಸಾರ ನೀಡಲಿವೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಟೀ ಪಾರ್ಟಿಗಳಿಂದ ಜನರೊಂದಿಗಿನ ಸಂಪರ್ಕ ಹೆಚ್ಚುತ್ತದೆ. ಬಿಜೆಪಿಯ ಕೇಂದ್ರ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸೇರಿದಂತೆ ಬಿಜೆಪಿ ಶಾಸಕರು ಟೀ ಹೋಟೆಲ್‌ಗಳಲ್ಲಿ ಜನತೆಯನ್ನು ಸಂಪರ್ಕಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :