Widgets Magazine

ಬಿಜೆಪಿಯಿಂದ ನಟ ವಿನೋದ ಖನ್ನಾರಿಗೆ ಸಿಕ್ಕಿತು ಗುರದಾಸಪುರದ ಟಿಕೆಟ್

PTI

ಕಾಂಗ್ರೆಸ್ ನಾಯಕ ಪ್ರತಾಪ ಸಿಂಗ್ ಬಾಜವಾ ವಿರುದ್ಧ ಖನ್ನಾ ಕಣಕ್ಕಿಳಿಯಲಿದ್ದಾರೆ. 2009 ರಲ್ಲಿ ಖನ್ನಾ ಕನಿಷ್ಠ ಮತಗಳ ಅಂತರದಿಂದ ಪ್ರತಾಪರಿಂದ ಸೋತಿದ್ದರು. ರಾಮಸ್ವರೂಪ ಶರ್ಮಾರಿಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅವರ ಎದುರಾಳಿಯಾಗಿ ಸದ್ಯದ ಸಂಸದೆ, ರಾಜ್ಯದ ಮುಖ್ಯಮಂತ್ರಿ ವೀರಭದ್ರ ಸಿಂಗ್‌ರ ಪತ್ನಿ ಪ್ರತಿಭಾ ಸಿಂಗ್ ಕಾಂಗ್ರೆಸ್ ನಿಂದ ಆಖಾಡಕ್ಕಿಳಿಯಲಿದ್ದಾರೆ.

ಉತ್ತರಪ್ರದೇಶದ 3 ಸ್ಥಾನಗಳಿಗೂ ಪಕ್ಷ ಉಮೇದುವಾರರನ್ನು ಘೋಷಿಸಿದೆ. ಫುಲ್ಪುರ್ ಲೋಕಸಭಾ ಕ್ಷೇತ್ರದಿಂದ ಕೇಶವ ಮೌರ್ಯ, ಸಂತ ಕಬೀರ ನಗರದಿಂದ ಶರದ್ ತ್ರಿಪಾಠಿ ಮತ್ತು ಹಾಥರಸದಿಂದ ರಾಜೇಶ ದಿವಾಕರ್ ಗೆ ಟಿಕೆಟ್ ನೀಡಲಾಗಿದೆ.

ನವದೆಹಲಿ| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ಮಂಗಳವಾರ ರಾತ್ರಿ ಭಾರತೀಯ ಜನತಾ ಪಕ್ಷ ತನ್ನ 9 ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ ಪ್ರಖ್ಯಾತ ನಟ ವಿನೋದ್ ಖನ್ನಾರವರ ಹೆಸರು ಕೂಡ ಇದ್ದು ಅವರಿಗೆ ಪಂಜಾಬಿನ ಗುರುದಾಸಪುರದ ಟಿಕೆಟ್ ನೀಡಲಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರದಿಂದ ಆರೀಫ ಮಝೀದ್ ಪಂಪೋರಿಯವರಿಗೆ ಕಣಕ್ಕಿಳಿಸಲಾಗುತ್ತಿದ್ದು, ಓರಿಸ್ಸಾದ ಭದ್ರಕ ನಿಂದ ಸರತ್ ದಾಸ , ಜಾಜಪುರದಿಂದ ಅಮಿಯಾ ಮಾಲೀಕರನ್ನು ಆಖಾಡಕ್ಕಿಳಿಸಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :