ಬಿಜೆಪಿಯೊಂದಿಗೆ ಮೈತ್ರಿಯಾಗದಿದ್ರೆ ಪತಿಗೆ ವಿಚ್ಚೇದನ ಬೆದರಿಕೆ ಒಡ್ಡಿದ ಎಲ್‌ಜೆಪಿ ಅಭ್ಯರ್ಥಿ

ನವದೆಹಲಿ, ಮಂಗಳವಾರ, 1 ಏಪ್ರಿಲ್ 2014 (14:11 IST)

PTI
ಚುನಾವಣಾ ಪ್ರಚಾರದಲ್ಲಿ ಚಿತ್ರ ವಿಚಿತ್ರ ಮತ್ತು ದ್ವೇಷದ ಹೇಳಿಕೆಗಳಿಗೆ ವೇದಿಕೆಯಾಗುತ್ತದೆ. ಆದರೆ, ಮುಂಗೇರ್ ಲೋಕಸಭಾ ಕ್ಷೇತ್ರದ ಲೋಕಜನ ಶಕ್ತಿ ಪಕ್ಷದ ಅಭ್ಯರ್ಥಿ ವೀಣಾ ದೇವಿ ಹೇಳಿಕೆ ವಿಪಕ್ಷಗಳಿಗೂ ನಗು ತರುವಂತೆ ಮಾಡಿದೆ.

ಬಿಹಾರ್ ರಾಜ್ಯದ ಮುಂಗೇರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಪ್ರಭಾವಿ ವ್ಯಕ್ತಿ ಸೂರಜ್‌ಭಾನ್ ಪತ್ನಿ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ವೀಣಾದೇವಿ, ತಮ್ಮ ಪತಿಯ ಮೇಲೆ ಒತ್ತಡ ಹೇರಿದ್ದಲ್ಲದೇ ರಾಮ್ ವಿಲಾಸ್ ಪಾಸ್ವಾನ್‌ಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಹೆದರಿಸಿ, ಇಲ್ಲವಾದಲ್ಲಿ ನಿಮಗೆ ವಿಚ್ಚೇದನ ನೀಡಿ ಬಿಜೆಪಿ ಸೇರುವುದಾಗಿ ಪ್ರತಿಜ್ಞೆ ಮಾಡಿದ್ದಾಳಂತೆ.

ದೇಶದಲ್ಲಿ ನರೇಂದ್ರ ಮೋದಿ ಅಲೆಯಿದೆ. ಆದ್ದರಿಂದ ಲೋಕಜನಶಕ್ತಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿ. ಒಂದು ವೇಲೆ ಎಲ್‌ಜೆಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾದಲ್ಲಿ ನಿಮಗೆ ವಿಚ್ಚೇದನ ನೀಡಿ ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಪತಿಗೆ ಹೇಳಿರುವುದಾಗಿ ವೀಣಾದೇವಿ ತಿಳಿಸಿದ್ದಾರೆ.

ಜೆಡಿಯು ಪಕ್ಷದ ಅಭ್ಯರ್ಥಿ ರಾಜೀವ್ ರಂಜನ್ ಸಿಂಗ್ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಲಲ್ಲನ್ ಸಿಂಗ್ ಕೂಡಾ ವೀಣಾ ದೇವಿ ಹೇಳಿಕೆಗೆ ಕಾಮಿಡಿ ಟಚ್ ನೀಡಿದ್ದಾರೆ.

ಇದೊಂದು ಚುನಾವಣೆ ಸಮಯವಾಗಿದೆ. ಆದರೆ, ಬೇರೆ ಪಕ್ಷದೊಂದಿಗಿನ ಮೈತ್ರಿಗಾಗಿ ಪತಿಗೆ ವಿಚ್ಚೇದನ ನೀಡುವ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಜೆಡಿಯು ನಾಯಕ ಲಲ್ಲನ್ ಸಿಂಗ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :