ಬಿಜೆಪಿ ಕೇವಲ ಕನಸುಗಳನ್ನು ಮಾರಾಟ ಮಾಡುವ ಪಕ್ಷ : ಕಾಂಗ್ರೆಸ್

ನವದೆಹಲಿ, ಶುಕ್ರವಾರ, 24 ಜನವರಿ 2014 (14:59 IST)

PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಾವು ಮಾಡುತ್ತಿದ್ದುದಾಗಿ ಹೇಳುತ್ತಿದ್ದಾರೆ. ಆದರೆ, ಅವರು ಟೀ ಮಾರಾಟ ಮಾಡುವುದನ್ನು ಯಾರೂ ನೋಡಿಲ್ಲ. ಕನಸುಗಳನ್ನು ಮಾರಾಟ ಮಾಡುವುದೇ ಬಿಜೆಪಿ ಪಕ್ಷದ ತಂತ್ರಗಾರಿಕೆಯಾಗಿದೆ ಎಂದು ಕೇಂದ್ರ ಸಚಿವ ಆರ್‌.ಪಿ.ಎನ್ ಸಿಂಗ್ ಆರೋಪಿಸಿದ್ದಾರೆ.

ಬಲಿಯಾ ಕ್ಷೇತ್ರದ ಮನಿಯಾರ್ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ನಿರ್ಭಯ್ ನರೈನ್ ಸಿಂಗ್ ಅವರ ಮೂರ್ತಿ ಅನಾವರಣಗೊಳಿಸಿ ಮಾತನಾಡುತ್ತಿದ್ದ ಅವರು, ಮೋದಿ ಟೀ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವತ್ತು ಚರ್ಚೆಯಾಗಿಲ್ಲ. ಅಥವಾ ಅವರು ಬೀದಿಗಳಲ್ಲಿ ಟೀ ಮಾರಾಟ ಮಾಡುತ್ತಿರುವುದನ್ನು ನೋಡಿದವರು ಇಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಸರಾಯು ನದಿಯ ನೀರನ್ನು ಹಾಲಿನಂತೆ ಪರಿವರ್ತಿಸುವದಾಗಿ ಕೂಡಾ ಜನತೆಗೆ ಭರವಸೆ ನೀಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ದೇಶದ ಪ್ರತಿಯೊಂದು ರಾಜ್ಯಕ್ಕೆ 24 ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಮೋದಿ ಭರವಸೆ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಕೇಂದ್ರದಲ್ಲಿ ಪ್ರದಾನಿಯಾಗಿದ್ದಾಗ ಮತ್ತು ಕಲ್ಯಾಣ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಯಾಕೆ 24 ಗಂಟೆಗಳ ಕಾಲ ವಿದ್ಯುತ್ ನೀಡಲಿಲ್ಲ ಎಂದು ಕೇಂದ್ರ ಸಚಿವ ಆರ್.ಪಿಎನ್ ಸಿಂಗ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :