ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ: ಶರದ್ ಪವಾರ್

ನವದೆಹಲಿ, ಗುರುವಾರ, 3 ಏಪ್ರಿಲ್ 2014 (09:06 IST)

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳುವ ಮೂಲಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಯುಪಿಎನ ಚಿಂತೆಯನ್ನು ಹೆಚ್ಚಿಸಿದ್ದಾರೆ.

PTI

ಆದರೆ ಬಿಜೆಪಿ ಮ್ಯಾಜಿಕ್ ಸಂಖ್ಯೆ 272 ರಿಂದ ದೂರ ಇರಲಿದೆ ಎಂದು ಪವಾರ್ ಭವಿಷ್ಯ ನುಡಿದಿದ್ದಾರೆ. ಪವಾರ್ ಅವರ ಈ ಹೇಳಿಕೆ ಕಾಂಗ್ರೆಸ್ಸನ್ನು ಕೆರಳಿಸುವ ಸಾಧ್ಯತೆ ಇದೆ.

"ಮೊದಲ ಅಂಕಿಅಂಶಗಳಿಗಿಂತ ಈಗ ಸುಧಾರಣೆ ಗೋಚರಿಸುತ್ತಿದೆ. ಇಲ್ಲಿಯವರೆಗಿನ ಪರಿಸ್ಥಿತಿಯ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಉತ್ತಮ ಸ್ಥಾನಗಳನ್ನು ಪಡೆಯಬಹುದು. ಬಿಜೆಪಿಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ಆದರೆ ಅದು (ಎನ್ಡಿಎ) ಮ್ಯಾಜಿಕ್ ಅಂಕಿ ತಲುಪಲಾಗದು".

"ತಮ್ಮ ಪಕ್ಷ ಎನ್ಸಿಪಿ ಸ್ಥಿತಿಯಲ್ಲಿ ಸುಧಾರಣೆಯಾಗಲಿದ್ದು, ದ್ವಿಗುಣ ಸೀಟ್‌ಗಳನ್ನು ಗೆಲ್ಲಲಿದೆ. ಈಗಾಗಲೇ 8 ಸ್ಥಾನಗಳು ನಮ್ಮ ಮುಷ್ಠಿಯಲ್ಲಿವೆ" ಎಂದು ಪವಾರ ತಿಳಿಸಿದ್ದಾರೆ.

"ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಲುವು ಮೋದಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿತ್ತು, ಅವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಸುರಕ್ಷಿತತೆಯನ್ನು ಅನುಭವಿಸುತ್ತಿದ್ದರು" ಎಂದು ಹೇಳುವುದರ ಮೂಲಕ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿಯ ಮೇಲೆ ಪವಾರ ನೇರ ದಾಳಿ ನಡೆಸಿದರು.ಇದರಲ್ಲಿ ಇನ್ನಷ್ಟು ಓದಿ :