ಬಿಜೆಪಿ ಪಕ್ಷಕ್ಕೆ 20 ಕೋಟಿ ಮತ ಬೀಳುವಂತೆ ಮಾಡ್ತೇನೆ: ಬಾಬಾ ರಾಮದೇವ್

ಹೈದರಾಬಾದ್, ಸೋಮವಾರ, 27 ಜನವರಿ 2014 (16:53 IST)

PR
ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20 ಕೋಟಿ ಮತದಾರರು ಬಿಜೆಪಿ ಪರವಾಗಿ 20 ಕೋಟಿ ಮತಗಳನ್ನು ಪಡೆಯಲು ಮಾರ್ಚ್ 23 ರಂದು ದೇಶಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ದೇಶಾದ್ಯಂತ ಯೋಗ ಮಹೋತ್ಸವದಲ್ಲಿ ಪಾಲ್ಗೊಳ್ಳಲು 23 ಕೋಟಿ ಜನ ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ. ಅದರಲ್ಲಿ 2 ಕೋಟಿ ಮತಗಳು ಬಿಜೆಪಿಗೆ ಪರವಾಗಿ ವಾಲಿಸುವುದೇ ನನ್ನ ಉದ್ದೇಶವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 340 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಮುಂಬರುವ ಮಾರ್ಚ್ 17 ರಿಂದ ಮಾರ್ಚ್ 23 ರವರೆಗೆ ಯೋಗಾ ವಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿದೇಶಗಳಲ್ಲಿರುವ ಕಪ್ಪು ಹಣ ಮರಳಿ ಪಡೆಯುವುದು ಮತ್ತು ದೇಶದಲ್ಲಿ ತೆರಿಗೆ ಸುಧಾರಣೆ ನೀತಿ ಜಾರಿಗೆ ತರುವುದೇ ನನ್ನ ಬೇಡಿಕೆಯಾಗಿದೆ. ನನ್ನ ಬೇಡಿಕೆಗೆ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಗಡ್ಕರಿ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು ಸಮ್ಮತಿ ಸೂಚಿಸಿದ್ದಾರೆ ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :