ಬಿಜೆಪಿ ವಿರುದ್ಧದ ಕೋಪ ಕಡಿಮೆಯಾಗಿದೆ ಎಂದ ಬಾಬಾ ರಾಮದೇವ್

ನಾಗಪುರ, ಮಂಗಳವಾರ, 18 ಮಾರ್ಚ್ 2014 (18:13 IST)

PTI
ಯೋಗಗುರು ಬಾಬಾ ರಾಮದೇವ್ ಭಾರತೀಯ ಜನತಾ ಪಕ್ಷಗಳ ಪರವಾಗಿ ಮತಯಾಚಿಸಲು ತಯಾರಾಗಿದ್ದಾರೆ. ಆದರೆ ಪಕ್ಷದ ಅವರ ಇನ್ನೂ ಉಳಿದುಕೊಂಡಿದೆ. ಅವರ ಪ್ರಕಾರ ಬಿಜೆಪಿಯಲ್ಲಿ ಗೆಲುವಿಗಾಗಿ ಅತಿಯಾದ ಉತ್ಸಾಹವಿದೆ. ಆದರೆ ಸಂಯಮದ ಅವಶ್ಯಕತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ, ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು ಚುನಾವಣೆಯನ್ನು ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ 100 ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆಲುವನ್ನು ಅಂತ್ಯಗೊಳಿಸಲಿದೆ.ಆಪ್ ನಾಯಕ ಕೇಜ್ರೀವಾಲ್ ಕಾಂಗ್ರೆಸ್‌ನ ಮುಖವಾಡ ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಾಬಾ ರಾಮದೇವ್, ಇದೀಗ, ಬಿಜೆಪಿ ಮೇಲಿನ ಕೋಪ ಶೇ.90 ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕೆಲವು ವಿಷಯಗಳಲ್ಲಿ ಬಿಜೆಪಿ ಪಕ್ಷ ಲಿಖಿತ ಸಮರ್ಥನೆ ನೀಡಿದಲ್ಲಿ ಮಾತ್ರ ತಾನು ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದರು.

ತಾವು ಬಹಿರಂಗಪಡಿಸಿದ ಕೆಲ ವಿಷಯಗಳ ಬಗ್ಗೆ ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಪ್ರಮಾಣ ಪತ್ರದ ಮೇಲೆ ಸಹಿ ಮಾಡಿದ್ದು, ಇದೀಗ ಪಕ್ಷದ ಉಳಿದ ನಾಯಕರು ಕೂಡಾ ಸಹ ಸಹಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಬಾಬಾ ರಾಮದೇವ್, ಇದೀಗ ಬಿಜೆಪಿ ಮತ್ತು ಮೋದಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...