Widgets Magazine

ಬಿಜೆಪಿ ಹೈಕಮಾಂಡ್ ಕಂಗಾಲು: ಜಸ್ವಂತ್ ನಂತ್ರ ಮತ್ತೊಬ್ಬ ಬಿಜೆಪಿ ನಾಯಕ ಸ್ವತಂತ್ರ ಅಭ್ಯರ್ಥಿ

PTI

ಟಿಕೆಟ್ ನಿರಾಕರಿಸಲಾಗಿದೆ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಮಾಜಿ ಕೇಂದ್ರ ಸಚಿವ ಮತ್ತು ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಸುಭಾಷ್ ಮಹಾರಿಯಾ ರಾಜಸ್ಥಾನದ ಸಿಕಾರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಟಿಕೆಟ್ ನಿರಾಕರಿಸಿದ ನಂತರ ಬಾರ್ಮರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಹೋರಾಡಲು ಪಕ್ಷದ ಹಿರಿಯ ಜಸ್ವಂತ್ ಸಿಂಗ್ ನಿರ್ಧಾರಿಸಿದ ಬೆನ್ನಲ್ಲೇ ಮಹಾರಿಯಾ ತಾವು ಸಹ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಜೈಪುರ್| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ಬರ್ಮಾರ್ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಬೆನ್ನಲ್ಲೆ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.
ಸರ್ವ ಸಮಾಜ ಮಹಾಪಂಚಾಯತ್‌ನ ಬೆಂಬಲದೊಂದಿಗೆ ಮಾರ್ಚ್ 26 ರಂದು ನಾಮನಿರ್ದೇಶನಕ್ಕೆ ಸಹಿ ಹಾಕಲಿದ್ದೇನೆ ಎಂದು ಅವರು ತಿಳಿಸಿದ್ದಾರೆ .


ಇದರಲ್ಲಿ ಇನ್ನಷ್ಟು ಓದಿ :