ಬಿಹಾರದಲ್ಲಿ ಸಿಪಿಐ (ಎಮ್ಎಲ್) ಅಭ್ಯರ್ಥಿಯ ಬಂಧನ

ಪಾಟ್ಣಾ, ಶುಕ್ರವಾರ, 4 ಏಪ್ರಿಲ್ 2014 (19:35 IST)

ಬಿಹಾರದ ಕಟಿಹಾರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಸಿಪಿಐ (ಎಮ್ಎಲ್) ಅಭ್ಯರ್ಥಿಯನ್ನು, ಶುಕ್ರವಾರ ನಾಮಪತ್ರ ಸಲ್ಲಿಸಿದ ಕೂಡಲೇ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

PTI

ಮಾಜಿ ಶಾಸಕರಾಗಿದ್ದ ಮಹಬೂಬ್ ಅಲಾಂ ಅವರನ್ನು ಕೊಲೆ ಕೇಸ್‌ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕೃತ ಮೂಲಗಳು ತಿಳಿಸಿವೆ.

ಒಂದು ದಶಕಗಿಂತ ಹೆಚ್ಚು ಅವಧಿಯಿಂದ ಅಲಂ ಹನ್ನೆರಡು ಅಪರಾಧಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೆಲವು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿದ್ದರು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ವರದಿಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :