ಬೃಹತ್ ರೋಡ್ ಶೋ ಬಳಿಕ ಸುಲ್ತಾನಪುರದಿಂದ ನಾಮಪತ್ರ ಸಲ್ಲಿಸಿದ ವರುಣ ಗಾಂಧಿ

ಸುಲ್ತಾನಪುರ, ಮಂಗಳವಾರ, 15 ಏಪ್ರಿಲ್ 2014 (16:30 IST)

PTI
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವರುಣ ಗಾಂಧಿ ಇಂದು ಲೋಕಸಭಾ ಕ್ಷೇತ್ರದಿಂದ ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶ ನೆಹರು- ಗಾಂಧಿ ಕುಟುಂಬದ ಇತರ ಸದಸ್ಯರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಗೆ ಬಹಳ ಹತ್ತಿರದಲ್ಲಿದೆ.

ನಾಮಪತ್ರವನ್ನು ಸಲ್ಲಿಸುವ ಮೊದಲು 34 ವರ್ಷದ ವರುಣ್‌ ರೋಡ್ ಶೋ ನಡೆಸಿದರು. ಬೆಂಬಲಿಗರ ಜತೆ ಬೃಹತ್ ಮೆರವಣಿಗೆಯೊಂದಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಕಛೇರಿಗೆ ಹೊರಟ ಅವರನ್ನು ಪಕ್ಷದ ಕಾರ್ಯಕರ್ತರು ಹೂವಿನ ದಳಗಳ ವೃಷ್ಟಿಗರೆಯುತ್ತ, ಡ್ರಮ್‌ಗಳನ್ನು ಬಾರಿಸುತ್ತ ಮುನ್ನಡೆಸಿದರು.

'ಕೇವಲ ನಾಮಪತ್ರ ಸಲ್ಲಿಸಲು ಅನುಮತಿ ನೀಡಲಾಗಿದೆ, ರಸ್ತೆ ಪ್ರದರ್ಶನಕ್ಕಲ್ಲ' ಎಂದು ಸ್ಥಳೀಯ ಆಡಳಿತ ರೋಡ್ ಶೋಗೆ ತಡೆಯೊಡ್ಡಿದ್ದರಿಂದ, 1.5 ಕಿ ಮೀ ಕ್ರಮಿಸಿದ ನಂತರ, ಸಹಜಂಗ್ ಚೌಕ್ ಬಳಿ ರೋಡ್ ಶೋ ಮೊಟಕುಗೊಳಿಸಲಾಯಿತು.

2009 ರಲ್ಲಿ ಪಿಲಿಭಿಟ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ವರುಣ್, ಈ ಬಾರಿ ಸುಲ್ತಾನಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಅವರಲ್ಲಿ ಹಾಲಿ ಸಂಸದ ಸಂಜಯ್ ಸಿಂಗ್ ಪತ್ನಿ ಅಮಿತಾ ಸಿಂಗ್ (ಕಾಂಗ್ರೆಸ್), ಶಕೀಲ್ ಅಹ್ಮದ್ (ಎಸ್ಪಿ) ಮತ್ತು ಪವನ್ ಪಾಂಡೆ (ಬಿಎಸ್ಪಿ) ಜತೆ ಚೌಕೋನದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.

ಗಮನಾರ್ಹವಾದುದೆನೆಂದರೆ, ವರುಣ್ ಬೆಂಬಲಿಗರು ಮೆರವಣಿಗೆಯಲ್ಲಿ ಹೊತ್ತೊಯ್ಯುತ್ತಿದ್ದ ಫಲಕಗಳಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರು ಇರಲಿಲ್ಲ. ಫಲಕಗಳ ಕೇಂದ್ರದಲ್ಲಿ ವರುಣ್ ದೊಡ್ಡ ಚಿತ್ರವಿತ್ತು.

ವರುಣ್ ಅಲ್ಲ ಇವರು ಚಂಡಮಾರುತ, ಸುಲ್ತಾನಪುರದ ಗಾಂಧಿ ಎಂಬ ಘೋಷಣೆಗಳನ್ನು ಕೂಗುತ್ತ ಬೆಂಬಲಿಗರು ಅವರನ್ನು ಹಿಂಬಾಲಿಸಿದರು.

ತನ್ನ ಮೊದಲ ಅಭಿಯಾನದಿಂದ ಇಲ್ಲಿಯವರೆಗೆ ವರುಣ್ ಮೋದಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಮತ್ತು ತನ್ನ ತಂದೆ ಸಂಜಯ್ ಗಾಂಧಿ ಹೆಸರನ್ನು ಪ್ರಚೋದಿಸುವುದರ ಮೂಲಕ ಜನರನ್ನು ತಲುಪಲು ಬಯಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...