ಭಯೋತ್ಪಾದಕತೆ ಸೃಷ್ಟಿಸುವ ಅಮಿತ್ ಶಾ ರೌಡಿ ನಂ 1: ಅಜಮ್ ಖಾನ್

ಉತ್ತರಪ್ರದೇಶ, ಮಂಗಳವಾರ, 8 ಏಪ್ರಿಲ್ 2014 (16:46 IST)

"ಭಯೋತ್ಪಾದಕತೆ ಸೃಷ್ಟಿಸಲು" ಉತ್ತರ ಪ್ರದೇಶಕ್ಕೆ ಬಂದಿರುವ ನರೇಂದ್ರ ಮೋದಿ ಅವರ ಆಪ್ತ ಸಹಾಯಕ ಅಮಿತ್ ಶಾ "ರೌಡಿ ನಂ .1" ಎಂದು ಸಮಾಜವಾದಿ ನಾಯಕ ಅಜಮ್ ಖಾನ್ ಆರೋಪಿಸಿದ್ದಾರೆ.

PTI

ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರದ ಹೊಣೆ ಹೊತ್ತಿರುವ ಅಮಿತ್ ಶಾ ಭಯವನ್ನು ಸೃಷ್ಟಿಸುವ ಉದ್ದೇಶದಿಂದ ಉತ್ತರಪ್ರದೇಶಕ್ಕೆ ಬಂದಿದ್ದಾರೆ. ಅಲ್ಲದೇ ಸೆಕ್ಷನ್ 302 (ಹತ್ಯೆ) ರ ಅಡಿಯಲ್ಲಿ ಆರೋಪವನ್ನು ಎದುರಿಸುತ್ತಿರುವ ಅವರು "ರೌಡಿ ನಂಬರ್.1" ಎಂದು ಮುಸ್ಲಿಂ ಪ್ರಾಬಲ್ಯದ ಮಸೂರಿ ಪ್ರದೇಶದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಜಮ್ ಖಾನ್ ಹೇಳಿದ್ದಾರೆ.

ದುರಾದೃಷ್ಟದಿಂದ ಆತನನ್ನು ರೌಡಿ ಎಂದು ಕರೆಯ ಬೇಕಾಗಿದೆ. ಆದರೆ ಕೊಲೆ ಆರೋಪಿಯನ್ನು ಒಳ್ಳೆಯ ವ್ಯಕ್ತಿ ಎಂದು ಕರೆಯಲಾಗುವುದಿಲ್ಲ. ಆತನನ್ನು ರೌಡಿ ಎಂದೇ ಕರೆಯಬೇಕಾಗುತ್ತದೆ ಎಂದು ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ಗಾಜಿಯಾಬಾದ್‌ದಿಂದ ಕಣಕ್ಕಿಳಿಯುತ್ತಿರುವ ಎಸ್ಪಿ ಅಭ್ಯರ್ಥಿ ಸುಡಾನ್ ರಾವತ್ ಪರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಪಕ್ಷಕ್ಕೆ ಧ್ವೇಷ ಸಾಧನೆಯೇ ಪ್ರಮುಖ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯ ಯಾವ ಚಿಂತನೆಯೂ ಇಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಮ್‌ಖಾನ್ ಕಿಡಿಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :