ಭೂ ಹಗರಣ: ಮಾಜಿ ಸಚಿವ ಆರ್. ಅಶೋಕ್ ಬಂಧನಕ್ಕೆ ಹೀರೆಮಠ್ ಆಗ್ರಹ

ಬೆಂಗಳೂರು, ಸೋಮವಾರ, 7 ಏಪ್ರಿಲ್ 2014 (15:05 IST)

PTI
ನಗರದಲ್ಲಿ ಅಕ್ರಮ ಆಸ್ತಿ ಪರಭಾರೆ ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ಅವರನ್ನು ಬಂಧಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೆಮಠ್ ಒತ್ತಾಯಿಸಿದ್ದಾರೆ.

ಸೋಮನಹಳ್ಳಿ ಮತ್ತು ಉತ್ತರಹಳ್ಳಿಯ ಸರ್ವೆ ನಂಬರ್ ಎರಡರಲ್ಲಿ ನೆಂಕಟೇಶ್ ಮೂರ್ತಿ ಪತ್ನಿ ಪ್ರಭಾ ಅವರಿಗೆ ಮಾಜಿ ಸಚಿವ ಅಶೋಕ್ ಅಕ್ರಮವಾಗಿ ಭೂಮಿ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ಅಶೋಕ್ ಅನೇಕ ಭೂಹಗರಣಗಳಲ್ಲಿ ಪಾಲ್ಗೊಂಡಿದ್ದು ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್. ಹೀರೆಮಠ್ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :