Widgets Magazine

ಮಕ್ಕಳಾಟ, ಎಂದು ಸೋನಿಯಾ ಹೇಳಿದ್ದು ರಾಹುಲ್‌ಗೆ, ನನಗಲ್ಲ: ಕ್ರೇಜಿವಾಲ್

PTI

"ಅವರು ತಮ್ಮ ಮಗನ ಬಗ್ಗೆ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಅವರು ಮಗುವಿನಂತೆ ಕಾಣುತ್ತಿದ್ದಾರೆ. ಆದರೆ ಅವರಿಗೆ 43 ವಯಸ್ಸು ಆಗಿದೆ. ಸೋನಿಯಾ ಟೀಕೆ ನನಗೆ ಅಲ್ಲ" ಎಂದು ಆಪ್ ನಾಯಕ ಕುಹಕವಾಡಿದ್ದಾರೆ.

ರಾಷ್ಟ್ರೀಯ ಚುನಾವಣೆಯಲ್ಲಿ, ಕಾಂಗ್ರೆಸ್ ಪರ ಪ್ರಚಾರದ ನೇತೃತ್ವ ವಹಿಸಿರುವ ಸೋನಿಯಾ ಗಾಂಧಿ ಅವರ ಮಗ ರಾಹುಲ್ , ತಾಯಿಯ ನಂತರ ಪಕ್ಷದ ಎರಡನೇ ಅತ್ಯಂತ ಹಿರಿಯ ನಾಯಕರಾಗಿದ್ದಾರೆ.

ದೆಹಲಿ| ನಾಗೇಂದ್ರ ತ್ರಾಸಿ|
"ಸರಕಾರ ನಡೆಸುವುದು ಮಕ್ಕಳಾಟವಲ್ಲ" ಎಂದು ತಮ್ಮ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇತ್ತೀಚಿಗೆ ಆಡಿದ್ದ ಟೀಕಾತ್ಮಕ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಆಪ್ ನಾಯಕ ಕ್ರೇಜಿವಾಲ್, ಸೋನಿಯಾ ತಮ್ಮ ಮಗನ ಬಗ್ಗೆ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಸಲಾಗಿದೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ದೆಹಲಿಯ ಚಾಂದನಿ ಚೌಕ್‌ನ ಕಿಕ್ಕಿರಿದ ಬೀದಿಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿ, ಮಾಜಿ ಪತ್ರಕರ್ತ ಆಶುತೋಷ್ ಪರ ಪ್ರಚಾರ ನಡೆಸುವುದರಲ್ಲಿ ಆಪ್ ನಾಯಕ ಮಗ್ನರಾಗಿದ್ದರು. ಆಶುತೋಷ್ ಬಿಜೆಪಿ ಹಿರಿಯ ನಾಯಕ ಹರ್ಷವರ್ಧನ್ ಮತ್ತು ಕೇಂದ್ರ ಸಚಿವ ಕಪಿಲ್ ಸಿಬಲ್ ವಿರುದ್ಧ ಕಣಕ್ಕಿಳಿದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :