Widgets Magazine

ಮಧ್ಯಪ್ರದೇಶ : ಸುಷ್ಮಾ ಸ್ವರಾಜ್‌ಗೆ ಕೈಕೊಟ್ಟ ಬಿಜೆಪಿ ನಾಯಕರು

PTI

ಸುಮಾರು 1.45 ಗಂಟೆ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ಆಕೆ ಸ್ಥಳಕ್ಕಾಗಮಿಸಿದಾಗ ಮಾಧ್ಯಮದವರನ್ನು ಹೊರತು ಪಡಿಸಿ ಬಿಜೆಪಿಯ ಯಾವ ನಾಯಕರು ಹಾಜರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಸುಷ್ಮಾರವರನ್ನು ಕರೆದೊಯ್ಯಲು ಪಕ್ಷದ ವಾಹನವೂ ಸಹ ಬಂದಿರಲಿಲ್ಲ. ಭದ್ರತಾ ವಾಹನ ಮಾತ್ರ ಅಲ್ಲಿ ನಿಂತಿತ್ತು .

ಶಿವಪುರಿ| ವೆಬ್‌ದುನಿಯಾ| Last Modified ಬುಧವಾರ, 16 ಏಪ್ರಿಲ್ 2014 (19:34 IST)
ತನ್ನನ್ನು ಸ್ವಾಗತಿಸಲು ಒಬ್ಬರೂ ಸ್ಥಳೀಯ ನಾಯಕರು ಆಗಮಿಸದ ಕಾರಣಕ್ಕೆ ಶಿವಪುರಿ ಗುಣಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಜೈಭಾನ್ ಸಿಂಗ್ ಪವಯ್ಯಾ ಪರ ಪ್ರಚಾರ ನಡೆಸಲು ಹೋಗಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.
ಪವಯ್ಯಾ ಆ ಸಮಯದಲ್ಲಿ ಅಶೋಕನಗರ ಕ್ಷೇತ್ರದಲ್ಲಿ ಪ್ರಚಾರ ನಿರತರಾಗಿರುವುದನ್ನು ಕಾರ್ಯಕರ್ತರಿಂದ ತಿಳಿದುಕೊಂಡ ಅವರು ಅಲ್ಲಿಂದ ಹಿಂತಿರುಗಿದರು ಎಂದು ತಿಳಿದು ಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :