ಮನಮೋಹನ್ ಸಿಂಗ್ ಸೂಪರ್ ಪಿ ಎಂ: ಪ್ರಿಯಾಂಕಾ ಗಾಂಧಿ

ಅಮೇಥಿ, ಬುಧವಾರ, 16 ಏಪ್ರಿಲ್ 2014 (17:32 IST)

ತಮ್ಮ ಕೈಕೆಳಗೆ ಕೆಲಸ ಮಾಡಿದ್ದ ಮಾಜಿ ಅಧಿಕಾರಿಗಳಿಂದ ಇತ್ತೀಚಿಗೆ ತೀವೃ ಟೀಕೆಗೆ ಗುರಿಯಾಗಿದ್ದ ಮನಮೋಹನ್ ಸಿಂಗ್ ಪ್ರಿಯಾಂಕಾ ಗಾಂಧಿಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

PTI

ತನ್ನ ತಾಯಿ ಮತ್ತು ಸಹೋದರನಿಗಾಗಿ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಂಕಾ "ಮನ್‌ಮೋಹನ್ ಸಿಂಗ್ ಭಾರತಕ್ಕೆ ಸೂಪರ್ ಪ್ರಧಾನಮಂತ್ರಿ" ಎಂದು ಹೇಳಿದ್ದಾರೆ.

2004 ಮತ್ತು 2008 ರ ನಡುವೆ ಪ್ರಧಾನಿ ಮನಮೋಹನ್ ಸಿಂಗ್ ಗೆ ಮಾಧ್ಯಮ ಸಲಹೆಗಾರರಾಗಿ ಸಲ್ಲಿಸಿದ ಸಂಜಯ್ ಬರು ಭಾನುವಾರ ಪುಸ್ತಕವೊಂದನ್ನು(ಆಕಷ್ಮಿಕ ಪ್ರಧಾನಿ- ದ ಮೇಕಿಂಗ್ ಆಂಡ್ ಅನ್ ಮೇಕಿಂಗ್ ಆಫ್ ಮನನೋಹನ್ ಸಿಂಗ್) ಬಿಡುಗಡೆ ಮಾಡಿದ್ದು, ಅದರಲ್ಲಿ "ಮನಮೋಹನ್ ಒಬ್ಬ ದುರ್ಬಲ ಪ್ರಧಾನಿ. ಅವರ ಕಛೇರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ನಿಯಂತ್ರಿಸಲ್ಪಡುತ್ತದೆ" ಎಂದು ಬರೆದಿದ್ದಾರೆ.


ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಈ ಪುಸ್ತಕವನ್ನು ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಮೇಲೆ ದಾಳಿ ನಡೆಸಲು ಬಳಸಿಕೊಂಡಿವೆ.

ಸೋಮವಾರ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿಸಿ ಪ್ರಕಾಶ ತಮ್ಮ ಪುಸ್ತಕ, 'ಕ್ರುಸೇಡರ್ ಅಥವಾ ಕಾನ್ಸ್ಪಿರೇಟರ್? ಕೋಲಗೇಟ್ ಮತ್ತು ಇತರ ಸತ್ಯಗಳು' ಬಿಡುಗಡೆ ಮಾಡಿದ್ದು ಇದರಲ್ಲಿ ಪ್ರಧಾನಿಯವರು ಒಂದು ಸರ್ಕಾರ ನಡೆಸುತ್ತಿದ್ದರೂ, 'ಕಡಿಮೆ' ರಾಜಕೀಯ ಅಧಿಕಾರ ಹೊಂದಿದ್ದಾರೆ ಎಂದು ಬರೆಯುವುದರ ಮೂಲಕ ಪ್ರಧಾನಿಯವರಿಗೆ ಮುಜುಗರವಾಗುವಂತೆ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...