Widgets Magazine

ಮಹಾರಾಷ್ಟ್ರ : ಥಾಣೆ ಜಿಲ್ಲೆಯ ಕಣದಲ್ಲಿದ್ದಾರೆ 67 ಅಭ್ಯರ್ಥಿಗಳು

PTI

ಜಿಲ್ಲೆಯಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಿದ್ದು, ಅವುಗಳೆಂದರೆ, ಥಾಣೆ, ಕಲ್ಯಾಣ್, ಭಿವಂಡಿ ಮತ್ತು ಪಾಲ್‌ಗರ್.

ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ ಮುಗಿದಿದ್ದು ಪಾಲ್‌ಗರ್‌ದಿಂದ 10 ಅಭ್ಯರ್ಥಿಗಳು, ಕಲ್ಯಾಣ್‌ದಿಂದ 18, ಭಿವಂಡಿಯಿಂದ 13 ಮತ್ತು ಥಾಣೆಯಿಂದ 26 ಉಮೇದುವಾರರು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಉಪ ಜಿಲ್ಲಾ ಚುನಾವಣಾ ಅಧಿಕಾರಿ ಮಾಧವಿ ಸರ್ದೇಶಮುಖ ತಿಳಿಸಿದರು.

ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ 72,70 ಲಕ್ಷ ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಚುನಾವಣೆ ಉದ್ದೇಶದಿಂದ ನಡೆಯುತ್ತಿದ್ದ ಅಕ್ರಮವನ್ನು ತಡೆಗಟ್ಟುವ ಸಲುವಾಗಿ, 2,720 ಜಾಮೀನುರಹಿತ ವಾರಂಟ್‪ನ್ನು ಜಾರಿ ಮಾಡಲಾಗಿದ್ದು, 8,36 ಲಕ್ಷ ದಾಖಲೆ ರಹಿತ ಹಣ 44,62 ಲಕ್ಷ ರೂ ಮೌಲ್ಯದ ಮದ್ಯವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಠಾಣಾ| ವೆಬ್‌ದುನಿಯಾ| Last Modified ಶುಕ್ರವಾರ, 11 ಏಪ್ರಿಲ್ 2014 (15:07 IST)
ಥಾಣೆಯಲ್ಲಿ ನಾಮಪತ್ರ ಹಿಂತೆದುಕೊಳ್ಳುವ ಅವಧಿ ಮುಗಿದಿದ್ದು ಏಪ್ರಿಲ್ 24 ರಂದು ನಿಗದಿಯಾಗಿರುವ ಚುನಾವಣೆಗೆ 67 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ನೀತಿ ಸಂಹಿತೆ ಉಲ್ಲಂಘನೆಯಡಿ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :