ಮೋದಿಯ ಪತ್ನಿಗೆ ಭಾರತ ರತ್ನ ಮತ್ತು ನೊಬೆಲ್ ದೊರೆಯಬೇಕು: ತರುಣ್ ಗೊಗೋಯ್

ದಿಸ್‌ಪುರ್, ಮಂಗಳವಾರ, 15 ಏಪ್ರಿಲ್ 2014 (16:37 IST)

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೇಲೆ ವೈಯಕ್ತಿಕ ಮತ್ತು ನಿಂದನಾತ್ಮಕ ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್, ಮೋದಿ ಪತ್ನಿ "ತ್ಯಾಗ ಮತ್ತು ನೋವಿನ ಸಂಕೇತ, ಅವರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

PTI

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಗೊಗೋಯ್ "ಮುಂದಿನ 10 ದಿನಗಳಲ್ಲಿ, ಜಶೋಧಾ ಬೆನ್‌ಗೆ 'ಭಾರತ ರತ್ನ' ನೀಡಬೇಕು ಎಂದು ಶಿಫಾರಸು ಬರೆಯಲು ಹೊರಟಿದ್ದೇನೆ. ಅವರಿಗೆ ನಾನು ನೂರು ಬಾರಿ ಸೆಲ್ಯೂಟ್ ಹೊಡೆಯಬೇಕು. ಅವರು ಭಾರತೀಯ ಹೆಣ್ತನದ ಔನತ್ಯದ ಮತ್ತು ಮಹಾನ್ ಮಹಿಳೆಯ ಸಂಕೇತವಾಗಿದ್ದಾರೆ" ಎಂದು ಹೇಳಿದರು.

"ಅವರು ಕೇವಲ ಭಾರತಕ್ಕಷ್ಟೇ ಅಲ್ಲ, ಆದರೆ ಇಡೀ ವಿಶ್ವಕ್ಕೆ , ತ್ಯಾಗ ಮತ್ತು ನೋವಿನ ಸಂಕೇತವಾಗಿದ್ದಾರೆ ".

"ವಾಸ್ತವವಾಗಿ ತಮ್ಮ ಮೂಕ ಬಳಲಿಕೆಗಾಗಿ ಅವರಿಗೆ ನೋಬಲ್ ಪ್ರಶಸ್ತಿ ನೀಡಬೇಕು. ಅವರ ನೋವನ್ನು ತಿಳಿದವರು ಬಹುಶಃ ದೇಶದಲ್ಲಿ ಯಾರೂ ಇಲ್ಲ ".

"ಜಶೋಧಾಬೆನ್ ನಿಜವಾದ ಸನ್ಯಾಸಿನಿಯಾಗಿದ್ದಾರೆ. ಮೋದಿ ತಾನು ಸನ್ಯಾಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಅಧಿಕಾರದ ಹಿಂದೆ ಹೊರಟ ಕೇಸರಿ ವ್ಯಕ್ತಿ. ಅವರು ಒಂದು ರೀತಿಯ 'ಅಮೆರಿಕನ್ ಸನ್ಯಾಸಿ'. ಅವರಿಗೆ ಗೊತ್ತಿರುವುದು ಮುಖ್ಯಮಂತ್ರಿ ಪದವಿಯ ಬಗ್ಗೆ ಮಾತ್ರ. ಯಾವ ರೀತಿಯ ಮನುಷ್ಯ ಈಗ ಭಾರತದ ಪ್ರಧಾನ ಮಂತ್ರಿಯಾಗಲು ಹೊರಟಿದ್ದಾನೆ " ಎಂದು ಗೊಗೋಯ್ ಹೀಗಳೆದಿದ್ದಾರೆ.

"ಇದು ಚುನಾವಣೆ ವಿಷಯವಲ್ಲ, ಇದು ಮಾನವೀಯತೆಗೆ ಸಂಬಂಧಿಸಿದ ಸಮಸ್ಯೆ" ಎಂದು ಮೋದಿಯನ್ನು ಅವರು ಕಟುವಾಗಿ ಖಂಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...