Widgets Magazine

ಮೋದಿ ಪ್ರಧಾನಿಯಾದ್ರೆ 'ಪಾಕ್ ಭಾರತೀಯ ಸೈನಿಕನ ಶಿರಚ್ಛೇದನೆಗೆ ಧೈರ್ಯ ತೋರದು : ಅಮಿತ್ ಶಾ

PTI

ಸಿಗ್ರಾದಲ್ಲಿ ಮೋದಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅಮಿತ್ ಶಾ , ಲೋಕಸಭೆ ಚುನಾವಣೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ ಯಾವುದೇ ಚೀನೀ ಹೆಲಿಕಾಪ್ಟರ್‌ ಅರುಣಾಚಲ ಪ್ರದೇಶದ ಇಳಿಯುವುದಿಲ್ಲ ಮತ್ತು ಎಂದಿಗೂ ಪಾಕಿಸ್ತಾನ ಭಾರತೀಯ ಸೈನಿಕನ ಶಿರಚ್ಛೇದಿಸುವ ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.

"ಮೋದಿ ಅಧಿಕಾರಕ್ಕೆ ಬಂದರೆ ಭಾರತೀಯ ಗಡಿಯಲ್ಲಿ ಹೇಮರಾಜ್‌ನಂತಹ ಯಾವುದೇ ಸೈನಿಕನ ತಲೆಯನ್ನು ಕೊಚ್ಚಿ ಹಾಕಲು ಪಾಕಿಸ್ತಾನ ತೋರುವುದಿಲ್ಲ ಎಂದರು.

"ಮೋದಿ ಪ್ರಧಾನಿ ಸ್ಥಾನದಲ್ಲಿ ಕುಳಿತರೆ ಸಾಕು. ಭಾರತೀಯ ಸೇನೆ ಕೂಡಾ ಅಗತ್ಯವಿಲ್ಲ. ಪಾಕಿಸ್ತಾನ ಬಾಲ ಮುದುರಿ ಕುಳಿತುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ವಾರಣಾಸಿ| ವೆಬ್‌ದುನಿಯಾ| Last Modified ಬುಧವಾರ, 2 ಏಪ್ರಿಲ್ 2014 (18:47 IST)
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ವಾರಣಾಸಿಯಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದ ದಯಾಶಂಕರ್ ಮಿಶ್ರಾ ಹಿರಿಯ ನಾಯಕ ಅಮಿತ್ ಶಾ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರಿಕೊಂಡರು.
"ಇಡೀ ದೇಶ ಬದಲಾವಣೆಯನ್ನು ಬಯಸುತ್ತಿದೆ. ಜನರು ಏರುತ್ತಿರುವ ಬೆಲೆಗಳು, ಭ್ರಷ್ಟಾಚಾರ, ಹಗರಣಗಳನ್ನು ತೊಡೆದುಹಾಕಲು ಬಯಸುತ್ತಿದ್ದಾರೆ. ಅದಕ್ಕಾಗಿ "ಅವರು ಗುಜರಾತ್‌ನಲ್ಲಿ 12 ವರ್ಷಗಳ ಉತ್ತಮ ಆಡಳಿತ ನೀಡಿದ ಅನುಭವ ಹೊಂದಿರುವ ಅನುಭವಿ ರಾಜಕಾರಣಿ ಮೋದಿಯನ್ನು ಬಯಸುತ್ತಿದ್ದಾರೆ." ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅಭಿಪ್ರಾಯ ಪಟ್ಟರು.


ಇದರಲ್ಲಿ ಇನ್ನಷ್ಟು ಓದಿ :