Widgets Magazine

ಮೈಕ್ ಆನ್ ಇದ್ದಾಗ ದುಡ್ಡಿನ ಮಾತಾಡಬೇಡ ಎಂದ ಬಾಬಾ ರಾಮದೇವ್

PTI

ಪತ್ರಿಕಾಗೋಷ್ಠಿ ಪ್ರಾರಂಭವಾಗುವ ಮೊದಲು ಬಾಬಾ ಪಕ್ಕ ಕುಳಿತಿದ್ದ ಮಹಂತ್ ಚಂದ್ರನಾಥ, ಬಾಬಾರ ಹತ್ತಿರ ಅಲವರ್ ಸಂಸದೀಯ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ನನಗೆ ಹಣದ ಕೊರತೆಯಾಗುತ್ತಿದೆ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ರಾಮದೇವ್ ಮೈಕ್ ಆನ್ ಇದ್ದಾಗ ಧನದ ಪ್ರಸ್ತಾಪ ಮಾಡಬೇಡ ಎಂದು ಪ್ರತಿಕ್ರಿಯಿಸಿದ್ದು ಕ್ಯಾಮರಾದಲ್ಲಿ ರೆಕಾರ್ಡ್ ಆಯಿತು. ಆ ಸಮಯದಲ್ಲಿ ಮೈಕ್ ಸಹ ಆನ್ ಆಗಿತ್ತು.

ಬಾಬಾ ಮೆಲುದನಿಯಲ್ಲಿ " ಇಲ್ಲಿ ಅದನ್ನು ಮಾತಾಡುವುದನ್ನು ನಿಲ್ಲಿಸು. ನೀನು ಮೂರ್ಖ" ಎಂದರು. ಪ್ರತಿಯಾಗಿ ಮಹಂತ ನಕ್ಕರು.

ಆದರೆ ನಾನು ಬಾಬಾರ ಬಳಿ ಅಂತಹ ಯಾವ ಮಾತನ್ನು ಆಡಿರಲಿಲ್ಲ ಎಂದು ಅಲವರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಂತ್ ತಿಳಿಸಿದ್ದಾರೆ. ಅಲವರ್ ರಾಜಸ್ಥಾನದಲ್ಲಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು ಎಪ್ರೀಲ್ 24 ಕ್ಕೆ ಅಲ್ಲಿ ಮತದಾನ ನಡೆಯಲಿದೆ.

ಈ ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್ ಮತದಾರರಿಗೆ ಧನ ಹಂಚುವ ಪ್ರಕರಣದಡಿ ಬಾಬಾ ಮತ್ತು ಮಹಂತ್‌ರನ್ನು ಬಂಧಿಸುವಂತೆ ಒತ್ತಾಯಿಸಿದೆ.

ಅಲವರ್| ವೆಬ್‌ದುನಿಯಾ|
ಧ್ವನಿವರ್ಧಕ ಆನ್ ಇದ್ದಾಗ ದುಡ್ಡಿನ ಮಾತಾಡ ಬೇಡ ಎಂದು ಬಿಜೆಪಿ ಅಭ್ಯರ್ಥಿ ಮಹಂತ್ ಚಂದ್ರನಾಥರ ಬಳಿ ಹೇಳುತ್ತಿದ್ದ ಬಾಬಾ ರಾಮದೇವ್ ಮಾತು ಕ್ಯಾಮರಾ ಸೆರೆಯಾಗುವುದರ ಮೂಲಕ ಅವರನ್ನು ಮುಜುಗರಕ್ಕೀಡು ಮಾಡಿದೆ.
ಉಲ್ಲೇಖನೀಯ ವಿಷಯವೇನೆಂದರೆ ಬಾಬಾ ವಿದೇಶದಲ್ಲಿ ಕೂಡಿಟ್ಟುರುವ ಕಪ್ಪು ಹಣವನ್ನು ಮರಳಿ ತರಿಸಲು ಹೋರಾಟ ಮಾಡುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :