ಮೋದಿಯನ್ನು ಟೀಕಿಸುವುದರ ಬದಲು ಕಾಂಗ್ರೆಸ್ ರಾಹುಲ್‌ಗೆ ಮದುವೆ ಮಾಡಿಸಲಿ: ಶಿವಸೇನಾ

ಮುಂಬೈ, ಸೋಮವಾರ, 14 ಏಪ್ರಿಲ್ 2014 (15:16 IST)

ನರೇಂದ್ರ ಮೋದಿ ಅವರ ವೈವಾಹಿಕ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲ್ಲದ ವಾಗ್ದಾಳಿಯ ವಿರುದ್ಧ ಮೋದಿ ಪರ ವಾದಕ್ಕೆ ನಿಂತಿರುವ ಶಿವಸೇನೆ, ವೃದ್ಧ ಪಕ್ಷ ಕಾಂಗ್ರೆಸ್ ಮೋದಿ ವಿರುದ್ದ ಮಾತನಾಡುವ ಮೊದಲು, ತನ್ನ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆ ಮಾಡಿಸಲಿ ಎಂದು ಖಾರವಾಗಿ ದಾಳಿ ನಡೆಸಿದೆ.

PTI

ಮೋದಿ ವೈವಾಹಿಕ ಸ್ಥಿತಿಯ ಬಗ್ಗೆ ಪದೇಪದೇ ಟೀಕಿಸುತ್ತಿರುವ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಮೋದಿ ತಮ್ಮ ವೈವಾಹಿಕ ಜೀವನದಲ್ಲಿ ಕಾನೂನು ಸಮರವನ್ನು ಕೈಗೊಂಡಿದ್ದರು ಎಂದು ಭಾವಿಸುವವರು ಮೂರ್ಖರು ಎಂದು ಹೇಳಿದೆ.

ಮೋದಿ ಮೇಲೆ ನಿರ್ದಿಷ್ಟ ವಿಷಯಗಳ ಮೇಲೆ ದಾಳಿ ನಡೆಸುವುದರ ಮೂಲಕ, ಹಣದುಬ್ಬರವನ್ನು ತಗ್ಗಿಸುತ್ತೀರಾ, ಕಪ್ಪು ಹಣವನ್ನು ಮರಳಿ ತರುತ್ತೀರಾ ಎಂದು ಕಾಂಗ್ರೆಸ್‌ಗೆ ತನ್ನ ಸಂಪಾದಕೀಯ ವಿಭಾಗದಲ್ಲಿ ಶಿವಸೇನೆ ಪ್ರಶ್ನಿಸಿದೆ.

ಗುಜರಾತ್ ಮುಖ್ಯಮಂತ್ರಿಯ ಬೆನ್ನ ಹಿಂದೆ ನಿಂತಿರುವ ಶಿವಸೇನಾ ಮೋದಿ ಮತ್ತು ಜಶೋಧಾಬೆನ್ ಎಳೆಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು ಮತ್ತು ಅವರು ಪರಸ್ಪರ ಒಪ್ಪಿಗೆಯ ಮೂಲಕ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು ಎಂದು ಹೇಳಿದೆ.

ವಡೋದರಾದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮೋದಿ ತಾವು ತಮ್ಮ 17ನೇ ವಯಸ್ಸಿನಲ್ಲಿ ಮದುವೆಯಾಗಿ ನಂತರ ಪ್ರತ್ಯೇಕವಾಗಿದ್ದೆ ಎಂದು ಪ್ರಕಟಿಸಿದ ನಂತರ ಕಾಂಗ್ರೆಸ್ ಮೋದಿಯ ಮೇಲೆ ಟೀಕೆಗಳ ಸುರಿಮಳೆಯನ್ನು ಸುರಿಸುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...