ಮೋದಿ ಒಬ್ಬ ದೊಡ್ಡ ನಾಯಿ ಎಂದು ಜರಿದ ಅಜಮ್ ಖಾನ್

ಲಖನೌ, ಶುಕ್ರವಾರ, 11 ಏಪ್ರಿಲ್ 2014 (16:56 IST)

ಗುರುವಾರ ಭಾರತೀಯ ಸೇನೆಯ ಬಗ್ಗೆ ತಾನು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಕಿಂಚಿತ್ ಬೇಸರ ವ್ಯಕ್ತ ಪಡಿಸದ, ಎಸ್ಪಿ ನಾಯಕ ಅಜಂ ಖಾನ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ಒಂದು ದೊಡ್ಡ ನಾಯಿ' ಎಂದು ಜರಿದಿದ್ದಾರೆ ಎಂದು ವರದಿಯಾಗಿದೆ.

PTI

ಗೋಧ್ರೋತ್ತರ ಹತ್ಯಾಕಾಂಡದ ಬಗ್ಗೆ ದುಃಖ ವ್ಯಕ್ತ ಪಡಿಸುತ್ತ, "ನನ್ನ ಕಾರು ಒಂದು ಪುಟ್ಟ ನಾಯಿಮರಿಯ ಮೇಲೆ ಹರಿದು ಹೋದಷ್ಟು ದುಖಃವಾಗುತ್ತಿದೆ" ಎಂಬ ಮೋದಿಯ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸುತ್ತಾ, "ಅಜಮ್ ನಾವು ಚಿಕ್ಕ ನಾಯಿಯಾಗಿದ್ದರೆ, ಅವರು ಒಂದು ದೊಡ್ಡ ನಾಯಿ" ಎಂದು ಮೂದಲಿಸಿದ್ದಾರೆ.

ಸೋಮವಾರ,ಖಾನ್ 1999 ರ ಕಾರ್ಗಿಲ್ ಯುದ್ಧ ಗೆದ್ದಿದ್ದು ಮುಸ್ಲಿಂ ಸೈನಿಕರು ಎಂದು ಹೇಳಿ, ಖಾನ್ ವ್ಯಾಪಕ ಖಂಡನೆಗೆ ಒಳಗಾಗಿದ್ದರು. ನಂತರ ಅವರು ಯುದ್ಧದಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಿದರು ಮತ್ತು ಎಲ್ಲಾ ಸಮುದಾಯಗಳ ಸೈನಿಕರು ಜಯವನ್ನು ಸಾಧಿಸಿದರು ಎಂದು ತಮ್ಮ ಹೇಳಿಕೆಯನ್ನು ತಿರುಚಿದ್ದರು.

ಖಾನ್ ಹೇಳಿಕೆಗೆ ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಮತ್ತು ಅವರ ಪುತ್ರ ಉತ್ತರಪ್ರದೇಶದ ಮುಖ್ಯಮಂತ್ರಿ ಕೂಡ ಬೆಂಬಲ ವ್ಯಕ್ತ ಪಡಿಸಿದ್ದರು.

ಗುರುವಾರ, ರಾಂಪುರ್‌ದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಭಿಯಾನದ ಸಂದರ್ಭದಲ್ಲಿ, ಕಾರ್ಗಿಲ್ ಯುದ್ಧದ ಮೇಲಿನ ತನ್ನ ಹೇಳಿಕೆಯನ್ನು ಟೀಕಿಸಿದ್ದಕ್ಕಾಗಿ ಮಾಧ್ಯಮದ ಮೇಲೆ ಕೂಡ ಖಾನ್ ಹರಿಹಾಯ್ದಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...