ಮೋದಿ ಕೈ ಮುಗ್ದ ಜನರ ಹತ್ಯೆಯಿಂದ ರಕ್ತ ಸಿಕ್ತವಾಗಿದೆ: ಮುಲಾಯಂ

ವಾರಣಾಸಿ, ಶುಕ್ರವಾರ, 24 ಜನವರಿ 2014 (14:57 IST)

PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೈಗಳು ಮುಗ್ದ ಜನರ ಹತ್ಯೆಯಿಂದ ರಕ್ತ ಸಿಕ್ತವಾಗಿವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ,

ದೇಶ ಬಚಾವೋ ದೇಶಬನಾವೋ ಆಂದೋಲನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಮಾಧ್ಯಮಗಳು ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಮಧ್ಯೆ ಪೈಪೋಟಿಯಿದೆ ಎನ್ನುವಂತೆ ಬಿಂಬಿಸುತ್ತಿವೆ ಎಂದು ಕಿಡಿಕಾರಿದರು.

ಉತ್ತರಪ್ರದೇಶದ ಜನತ ಸದಾ ನನ್ನೊಂದಿಗಿರುವವರೆಗೆ ಮೋದಿ ಗೆಲ್ಲಲು ಸಾಧ್ಯವಿಲ್ಲ. ಮೋದಿ ಮಾನವತೆಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ರಾಜ್ಯವನ್ನು ಮೂರನೇ ಬಾರಿಗೆ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ನನ್ನನ್ನು ಎದುರಿಸುವ ಯಾವುದೇ ನಾಯಕರುಗಳು ದೊರೆಯದಿದ್ದರಿಂದ ಗುಜರಾತ್‌ನಿಂದ ಮೋದಿಯನ್ನು ಕರೆತಂದಿದ್ದಾರೆ. ಮೋದಿ ಉತ್ತರಪ್ರದೇಶವನ್ನು ಗುಜರಾತ್ ರಾಜ್ಯವಾಗಿ ಪರಿವರ್ತಿಸುವ ಭರವಸೆ ನೀಡುತ್ತಿದ್ದಾರೆ. ಅಂದರೆ, ಇಲ್ಲಿಯೂ ಮುಸ್ಲಿಮರ ವಿರುದ್ಧ ದಂಗೆಯಾಗಲಿ ಎನ್ನುವುದೇ ಅವರ ಬಯಕೆಯಾಗಿದೆ ಎಂದು ಮುಲಾಯಂ ಸಿಂಗ್ ಯಾದವ್ ತಿರುಗೇಟು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :