ರಾಜಕೀಯ ಕೂಸು ಆಮ್ ಆದ್ಮಿಗೆ ಗುಜರಾತಿನಲ್ಲಿ ಫಂಡ್ ಕೊರತೆ

ಅಹ್ಮದಾಬಾದ್, ಸೋಮವಾರ, 17 ಮಾರ್ಚ್ 2014 (15:05 IST)

PTI
ದೊಡ್ಡ ಪಕ್ಷಗಳ ನಡುವೆ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಗುಜರಾತಿನಲ್ಲಿ ಫಂಡ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರವನ್ನು ಬೀದಿ ನಾಟಕಗಳು ಮತ್ತು ಯುವಜನರಿಗೆ ತರಬೇತಿ ಮುಂತಾದ ಅಸಾಂಪ್ರದಾಯಿಕ ಮಾರ್ಗಗಳ ಮೂಲಕ ಮಾಡಲು ನಿರ್ಧರಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯಂತ ಘಟಾನುಘಟಿ ಪಕ್ಷಗಳಿಗೆ ಸಂದಾಯವಾಗುತ್ತಿರುವ ದೇಣಿಗೆಗಳಿಗೆ ಹೋಲಿಸಿದರೆ ಆಮ್ ಆದ್ಮಿಗೆ ಸಿಗುವ ದೇಣಿಗೆಗಳು ಕಡಿಮೆ.ಇದರಿಂದಾಗಿ ಅದು ಪೋಸ್ಟರ್‌ಗಳು, ಜಾಹೀರಾತುಗಳು, ಟಿವಿ, ರೇಡಿಯೋ ಅಥವಾ ಮುದ್ರಣಮಾಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ಸಾಂಪ್ರದಾಯಿಕ ವಿಧಾನಗಳ ಮೂಲಕ ಜನರ ಸಂಪರ್ಕವನ್ನು ಕೈಬಿಡುವುದಾಗಿ ತಿಳಿಸಿದೆ.

ನರೇಂದ್ರ ಮೋದಿ ಆಡಳಿತದ ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿಯಾಗಿ ಹೊಮ್ಮುವ ಆಕಾಂಕ್ಷೆಯನ್ನು ಎಎಪಿ ಹೊಂದಿದೆ. ಆದರೆ ನಾವು ಎಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮದ ಮೂಲಕ ಜಾಹೀರಾತು ಕೊಡುವಷ್ಟು ಸಾಮರ್ಥ್ಯ ಹೊಂದಿಲ್ಲ ಎಂದು ಎಎಪಿ ರಾಜ್ಯ ಸಂಚಾಲಕ ಸುಖದೇವ್ ಪಟೇಲ್ ತಿಳಿಸಿದರು. ಮನೆಯಿಂದ ಮನೆಗೆ ಪ್ರಚಾರ ಮುಂತಾದ ಸಾಂಪ್ರದಾಯಿಕ ವಿಧಾನಗಳ ಜತೆಗೆ, ನುಕ್ಕಾಡ್ ಚರ್ಚೆಗಳು, ಮೊಹಲ್ಲಾ ಸಭಾಗಳು ಮತ್ತು ಯುವಜನರಿಗೆ ತರಬೇತಿ ಮುಂತಾದವನ್ನು ಆಯೋಜಿಸಲಾಗುತ್ತದೆ ಎಂದು ಪಟೇಲ್ ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...