ರಾಜಕೀಯ ಪಕ್ಷಗಳ ಅತೃಪ್ತ ಮುಖಂಡರಿಗೆ ಗಾಳಹಾಕುತ್ತಿರುವ ಜೆಡಿಎಸ್

ಶುಕ್ರವಾರ, 21 ಮಾರ್ಚ್ 2014 (19:43 IST)

PR
PR
16 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿರುವ ಜೆಡಿಎಸ್‌ನಲ್ಲಿ ಚುನಾವಣೆಯನ್ನು ಗೆಲ್ಲುವಂತ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಹೀಗಾಗಿ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಅತೃಪ್ತ ಮುಖಂಡರಿಗೆ ಗಾಳ ಹಾಕುವುದಕ್ಕೆ ಜೆಡಿಎಸ್ ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಮತ್ತೆ ನೆಲೆ ಸಿಗದೇ ಕಂಗಾಲಾಗಿದ್ದ ಕೆಜೆಪಿ ವಿ.ಧನಂಜಯ್ ಕುಮಾರ್ ಅವರಿಗೆ ಬಲೆ ಬೀಸಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಕಣಕ್ಕಿಳಿಸಿದೆ. ಈಗ ನಿವೃತ್ತ ಡಿಜಿಪಿ ಮತ್ತು ಮಾಜಿ ಲೋಕಸಭೆ ಸದಸ್ಯ ಎಚ್.ಟಿ.ಸಾಂಗ್ಲಿಯಾನರಿಗೆ ಗಾಳ ಹಾಕುವುದಕ್ಕೆ ಸಜ್ಜಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಡ್ತೀವಿ, ಬನ್ನಿ ಎಂದು ಅವರಿಗೆ ಆಹ್ವಾನವಿತ್ತಿದೆ.

ಸಾಂಗ್ಲಿಯಾನ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿರುವುದಿದರಿಂದ ಅಸಮಾಧಾನಗೊಂಡಿದ್ದರು. ಗುರುವಾರ ಬೆಳಿಗ್ಗೆ ಸಾಂಗ್ಲಿಯಾನ ದೇವೇಗೌಡರಿಗೆ ಕರೆ ಮಾಡಿ ಪಕ್ಷಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಾಂಗ್ಲಿಯಾನ ಅವರನ್ನು ವೈಯಕ್ತಿಕವಾಗಿ ಬುಧವಾರ ಭೇಟಿಯಾಗಿದ್ದರು.ಇದೇ ಸಂದರ್ಭದಲ್ಲಿ, ಜೆಡಿಎಸ್ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರಿಗೆ ಗಾಳ ಹಾಕುವುದಕ್ಕೆ ಯತ್ನಿಸುತ್ತಿದೆ. ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರ ನಾಮಕರಣವನ್ನು ಕಾಂಗ್ರೆಸ್ ಪ್ರೈಮರಿಗೆ ತಾಂತ್ರಿಕ ಕಾರಣದ ಮೇಲೆ ನಿರಾಕರಿಸಲಾಗಿತ್ತು. ನಂತರ ಬೆಂಗಳೂರು ಸೆಂಟ್ರಲ್ ಟಿಕೆಟ್ ವಂಚಿತರಾದ ಜಾಫರ್ ಷರೀಫ್ ಅವರಿಗೆ ಜೆಡಿಎಸ್ ಮೈಸೂರಿನ ಟಿಕೆಟ್ ಖಚಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...