ರಾಬರ್ಟ್ ವಾದ್ರಾ ಸಿದ್ಧಾಂತ ಏನು?: ಪ್ರಿಯಾಂಕಾರನ್ನು ಪ್ರಶ್ನಿಸಿದ ಮೇನಕಾ ಗಾಂಧಿ

ಅಮೇಥಿ, ಬುಧವಾರ, 16 ಏಪ್ರಿಲ್ 2014 (17:12 IST)

ವರಸೆಯಲ್ಲಿ ತಮ್ಮ ಮಗಳಾದ ಪ್ರಿಯಾಂಕಾ ಗಾಂಧಿ ಮೇಲೆ ತೀಕ್ಷ್ಣ ದಾಳಿ, ನಡೆಸಿರುವ ಬಿಜೆಪಿ ನಾಯಕಿ ಮೇನಕಾ ಗಾಂಧಿ, ನನ್ನ ಮಗ ವರುಣ ಗಾಂಧಿ ಅಥವಾ ಬಿಜೆಪಿ ಸಿದ್ಧಾಂತಗಳಿಗೆ ಟೀಕೆ ಮಾಡುವುದರ ಮೊದಲು ಆಕೆಯ ಪತಿ ರಾಬರ್ಟ್ ವಾದ್ರಾ ಸಿದ್ಧಾಂತವೇನೆಂದು ಪ್ರಿಯಾಂಕಾ ಕಂಡುಕೊಳ್ಳಲಿ ಎಂದು ಹೇಳಿದ್ದಾರೆ.

PTI

ಖಾಸಗಿ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಫಿಲಿಭಿಟ್‌ನ ಬಿಜೆಪಿ ಅಭ್ಯರ್ಥಿ, ತುಂಬ ಭಯಪಟ್ಟು ಕೊಂಡಿದ್ದಾಗ ಜನರು ಏನು ಬೇಕಾದರೂ ಮಾತನಾಡುತ್ತಾರೆ ಎಂದು ಹೇಳಿದರು. ಮೊದಲು ಅವರು ವರುಣ ಬಗ್ಗೆ ಪ್ರಿಯಾಂಕಾ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರಾದರೂ, ನಂತರ ಪ್ರಿಯಾಂಕಾ, ತನ್ನ ಪತಿ ರಾಬರ್ಟ್ ವಾದ್ರಾ ಜತೆ, ಆತನ ಸಿದ್ಧಾಂತವೇನೆಂದು ಕಂಡುಕೊಳ್ಳಲಿ. ನಂತರ ಅವಳು ಬಿಜೆಪಿ ವರುಣ ಗಾಂಧಿ ಸಿದ್ಧಾಂತದ ಬಗ್ಗೆ ಮಾತಾಡಲಿ. ವಾದ್ರಾರವರ ಸಿದ್ಧಾಂತವನ್ನು ತಿಳಿದುಕೊಂಡ ನಂತರ ಆಕೆ ಎರಡು ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಅರಿತು ಕೊಳ್ಳಲು ಸಾಧ್ಯ ಎಂದು ಗುಡುಗಿದ್ದಾರೆ.

ನನ್ನ ತಂದೆ ರಾಜೀವ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು. ವರುಣ ಮತ್ತು ಅವರ ಪಕ್ಷದ ದೇಶವನ್ನು ಒಡೆಯುವುದಾಗಿದೆ ಎಂದು ಪ್ರಿಯಾಂಕಾ ಗಾಂಧಿ ಇತ್ತೀಚಿಗೆ ಆರೋಪಿಸಿದ್ದರು.

ಕಾಂಗ್ರೆಸ್ ಗಾಂಧಿ ಮತ್ತು ಬಿಜೆಪಿಯ ಗಾಂಧಿ ನಡುವೆ ಮೂಲಭೂತ ವ್ಯತ್ಯಾಸ ಏನು ಎಂದು ಕೇಳಿದಾಗ, ಮೇನಕಾ ಗಾಂಧಿ "ನಾವು ಬೇರೆ ಬೇರೆ ರೀತಿಯ ಜನ ಮತ್ತೂ ಹೆಚ್ಚಿಗೆ ನಾನೇನನ್ನೂ ಹೇಳಲು ಬಯಸುವುದಿಲ್ಲ" ಎಂದು ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...