ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ

ರಾಯಬರೇಲಿ, ಬುಧವಾರ, 2 ಏಪ್ರಿಲ್ 2014 (17:34 IST)

PR
ಉತ್ತರಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಇಂದು ಸಲ್ಲಿಸಿದ್ದಾರೆ.

ರಾಯಬರೇಲಿ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ 67 ವರ್ಷ ವಯಸ್ಸಿನ ಸೋನಿಯಾ ಗಾಂಧಿ, ತಮ್ಮ ಪುತ್ರ ರಾಹುಲ್ ಗಾಂಧಿಯೊಂದಿಗೆ ಆಗಮಿಸಿದರು.

ಸಮಾಜವಾದಿ ಪಕ್ಷ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಎದುರು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಬಿಜೆಪಿ ಪಕ್ಷ ಸೋನಿಯಾ ವಿರುದ್ಧ ಸುಪ್ರೀಂಕೋರ್ಟ್ ವಕೀಲರಾದ ಅಜಯ್ ಅಗರ್‌ವಾಲ್ ಅವರನ್ನು ಕಣಕ್ಕಿಳಿಸಿದೆ. ಆಮ್ ಆದ್ಮಿ ಪಕ್ಷ ಇನ್ನೂ ಅಭ್ಯರ್ಥಿಯನ್ನು ಘೋಷಿಸಬೇಕಾಗಿದೆ.

ರಾಜಯಬರೇಲಿ ಲೋಕಸಭಾ ಕ್ಷೇತ್ರದ ಪ್ರೀತಿಯಿಂದ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಜಯಭೇರಿ ಭಾರಿಸುವಲ್ಲಿ ನೆರವಾಗುತ್ತಾರೆ ಎಂದು ಸೋನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದು ಮುಂಜಾನೆ ದೆಹಲಿಯಿಂದ ರಾಯಬರೇಲಿಗೆ ಆಗಮಿಸಿದ ಸೋನಿಯಾಗೆ ನಗರದ ಫುರ್ಸತ್‌ಗಂಜ್‌‍ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರಿಂದ ಭಾರಿ ಸ್ವಾಗತ ದೊರೆಯಿತು.ಇದರಲ್ಲಿ ಇನ್ನಷ್ಟು ಓದಿ :