ರಾಹುಲ್‌ನನ್ನು ಹೊಗಳಿದ್ದಕ್ಕೆ ಮಗ ವರುಣ್‌ಗೆ ಛೀಮಾರಿ ಹಾಕಿದ ಮೇನಕಾ ಗಾಂಧಿ

ಅಮೇಥಿ, ಗುರುವಾರ, 3 ಏಪ್ರಿಲ್ 2014 (16:01 IST)

ಎರಡು ದಿನಗಳ ಹಿಂದೆ ತನ್ನ ಸೋದರಸಂಬಂಧಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅಮೇಥಿ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯ ವೇಳೆ ಹೊಗಳಿದ್ದಕ್ಕಾಗಿ ವರುಣ್ ಗಾಂಧಿ ತಾಯಿ ಮೇನಕಾ ಗಾಂಧಿ ಯಾವುದೇ ಹೇಳಿಕೆಯನ್ನು ನೀಡುವ ಮೊದಲು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

PTI

ಮಂಗಳವಾರ ರಾತ್ರಿ ವರುಣ್ ನೀಡಿದ ಹೇಳಿಕೆ ತಪ್ಪು ಎಂದು ಮೇನಕಾ ಗಾಂಧಿ ತಿಳಿಸಿದ್ದಾರೆ.

“ವರುಣ್ ಗಾಂಧಿ ಹೇಳಿಕೆ ತಪ್ಪಾಗಿದೆ.ನಾನು ಅಮೇಥಿಯವಳೇ. ಸತ್ಯ ಪರಿಶೀಲಿಸುವ ಮೊದಲು ಅವನು ಮಾತನಾಡ ಬಾರದಾಗಿತ್ತು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಶಿಕ್ಷಕರು ಮತ್ತು ಸಮಾಜಸೇವಾ ಕಾರ್ಯಕರ್ತರ ಗುಂಪನ್ನು ಉದ್ದೇಶಿಸಿ ಮಾತನಾಡಿದ್ದ ವರುಣ್ (34) "ನಾನು ರಾಜಕೀಯಕ್ಕೆ ಹೊಸ ರೂಪ ತರಲು ಬಯಸುತ್ತೇನೆ. ರಾಹುಲ್‌ಜೀ ಅಮೇಥಿಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ರೀತಿಯಲ್ಲಿ ಕೆಲಸ ಮಾಡ ಬಯಸುತ್ತೇನೆ. ಆದರೆ ಅವರು ಮಾಡಿರುವ ಕೆಲಸವನ್ನು ನಾನು ಹತ್ತಿರದಿಂದ ನೋಡಿಲ್ಲ" ಎಂದು ತಮ್ಮ ಅಣ್ಣನನ್ನು ಕೊಂಡಾಡಿದ್ದರು.

ಅಮೇಥಿ ಕ್ಷೇತ್ರದಲ್ಲಿ ಜನರ ಕಲ್ಯಾಣಕ್ಕಾಗಿ ರಾಹುಲ್ ಜಾರಿಯಲ್ಲಿ ತಂದ ಯೋಜನೆಗಳು "ತಕ್ಕಮಟ್ಟಿಗೆ ಯೋಗ್ಯ" ವಾಗಿವೆ ಎಂದು ಅವರು ಹೇಳಿದ್ದರು.

ಆದರೆ ವರುಣ್ ತಾವು ನೀಡಿದ್ದ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಬಲವಂತ ಬಂದಿದ್ದರಿಂದ ತಾನು ರಾಹುಲ್ ಗಾಂಧಿಯನ್ನು ಸಮರ್ಥಿಸುತ್ತಿಲ್ಲ ಅವರು ಸ್ಪಷ್ಟಪಡಿಸಿದ್ದರು.

ವರುಣ್ ಪ್ರಶಂಸೆಯನ್ನು ರಾಹುಲ್ ಪ್ರೀತಿಯಿಂದ ಸ್ವೀಕರಿಸಿದರ ನಂತರ ವರುಣ್ ಸ್ಪಷ್ಟೀಕರಣ ಕೇಳಿ ಬಂತು.

"ವರುಣ್ ಹೇಳಿದ್ದೆಲ್ಲ ಸತ್ಯ. ಅಮೇಥಿಯಲ್ಲಿ ನಾನು ಕೈಗೊಂಡ ಕೆಲಸವನ್ನು ನೋಡಿ ಇತರರು ಶ್ಲಾಘಿಸುತ್ತಾರೆ ಎಂದು ತಿಳಿದು ತುಂಬಾ ಸಂತೋಷವಾಗಿದೆ " ಎಂದು ರಾಹುಲ್ ಗಾಂಧಿ ನಿನ್ನೆ ರಾಯ್‌ಬರೇಲಿಯಲ್ಲಿ ಪ್ರತಿಕ್ರಿಯಿಸಿದ್ದರು.

"ಅಮೇಥಿಯ ರೈತರನ್ನು ವಿಶ್ವದ ಉಳಿದ ರೈತರ ಜತೆ ಸಂಪರ್ಕಿತರಾಗುವಂತೆ ಮಾಡಲು ನಾವು ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದೆವು " ಎಂದು ರಾಹುಲ್ ಗಾಂಧಿ ಹೇಳಿದ್ದರು.ಇದರಲ್ಲಿ ಇನ್ನಷ್ಟು ಓದಿ :