ರಾಹುಲ್ ಬಡವರೊಂದಿಗೆ ಉಚಿತವಾಗಿ ಊಟ ಸೇವನೆ, ಆದ್ರೆ ಮೋದಿ, ಕೇಜ್ರಿವಾಲ್ ಶುಲ್ಕ ವಿಧಿಸುತ್ತಾರೆ: ದಿಗ್ವಿಜಯ್ ಸಿಂಗ್

ಭೋಪಾಲ್, ಸೋಮವಾರ, 17 ಮಾರ್ಚ್ 2014 (17:29 IST)

PTI
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಬಡವರೊಂದಿಗೆ ಊಟ ಮಾಡುತ್ತಾರೆ. ಆದರೆ, ಮೋದಿ ಮತ್ತು ಕೇಜ್ರಿವಾಲ್ ತಮ್ಮೊಂದಿಗೆ ಊಟ ಮಾಡುವ ವ್ಯಕ್ತಿಗಳಿಗೆ ಶುಲ್ಕ ವಿಧಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ತನ್ನೊಂದಿಗೆ ಊಟ ಮಾಡುವ ವ್ಯಕ್ತಿಗಳಿಗೆ 20 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ. ಇಂತಹ ನಾಯಕರು ಹೇಗೆ ಸಾಮಾನ್ಯ ಜನರನ್ನು ಪ್ರತಿನಿಧಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ತೀರಾ ಬಡವರ ಮನೆಗಳಿಗೆ ತೆರಳಿ ಅವರೊಂದಿಗೆ ಕುಳಿತು ಊಟ ಸೇವಿಸುತ್ತಾರೆ. ಕಾಂಗ್ರೆಸ್‌ಗೆ ಮತ್ತು ಕೇಜ್ರಿವಾಲ್‌ ನಡುವೆ ಬಾರಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಟ್ವೀಟ್ ಮಾಡಿದ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ದಲಿತರು, ಬಡವರೊಂದಿಗೆ ಉಚಿತವಾಗಿ ಊಟ ಮಾಡುತ್ತಾರೆ. ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 1 ಲಕ್ಷ ರೂಪಾಯಿಗಳಿಂದ 2.5 ಕೋಟಿ ರೂಪಾಯಿಗಳವರೆಗೆ ಶುಲ್ಕ ವಿಧಿಸುತ್ತಾರೆ. ಆಯ್ಕೆ ನಿಮ್ಮದು ಎಂದು ಜನತೆಗೆ ಕರೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...