ರೈತರಿಂದ ಭೂಮಿ ಕಸಿದು ಕೈಗಾರಿಕೋದ್ಯಮಿಗಳಿಗೆ ನೀಡುತ್ತಿರುವ ಮೋದಿ, ಹೂಡಾ: ಕೇಜ್ರಿವಾಲ್

ರೋಹ್ಟಕ್, ಶುಕ್ರವಾರ, 28 ಮಾರ್ಚ್ 2014 (16:25 IST)

PTI
ಕೈಗಾರಿಕೋದ್ಯಮಿಗಳನ್ನು ಓಲೈಸಲು ರೈತರ ಫಲವತ್ತಾದ ಭೂಮಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಕಸಿದುಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಹರಿಯಾಣಾದಲ್ಲಿ ರೋಡ್‌ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಜ್ರಿವಾಲ್, ಹರಿಯಾಣಾ ಮುಖ್ಯಮಂತ್ರಿ ರೈತರಿಂದ ಭೂಮಿಯನ್ನು ಕಸಿದು ರಾಬರ್ಟ್ ವಾದ್ರಾ ಮತ್ತು ಮುಕೇಶ್ ಅಂಬಾನಿಗೆ ಕೊಡುತ್ತಿದ್ದಾರೆ. ವಾದ್ರಾ ಮತ್ತು ಮುಕೇಶ್ ಅಂಬಾನಿಯವರ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಲು ಪ್ರತಿಯೊಬ್ಬರು ಹೆದರುತ್ತಿದ್ದಾರೆ. ಆದರೆ, ನಾನು ಬಹಿರಂಗವಾಗಿ ಅವರ ಅವ್ಯವಹಾರಗಳನ್ನು ಖಂಡಿಸಿದ್ದೇನೆ ಎಂದು ಗುಡುಗಿದರು.

ವಾದ್ರಾ ಮತ್ತು ಸಿಎಂ ಹೂಡಾ ಹರಿಯಾಣಾದ ಜನತೆಯನ್ನು ಲೂಟಿ ಹೊಡೆಯುತ್ತಿದ್ದಾರೆ. ಅನೇಕ ವ್ಯಕ್ತಿಗಳು ವಾದ್ರಾ ವಂಚನೆ ವಿರುದ್ಧ ಮೌನವಾಗಿರುವಂತೆ ಸಲಹೆ ನೀಡಿದರು. ಆದರೆ, ನಾನು ಜೀವಕ್ಕೆ ಹೆದರದೆ ವಾದ್ರಾ ಮತ್ತು ಹೂಡಾ ಅವರ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...