ಲೋಕಸಭೆ ಚುನಾವಣೆ:ಆಸ್ಸಾಂನಲ್ಲಿ ಶೇ.75ರಷ್ಟು ಮತದಾನ

ನವದೆಹಲಿ, ಸೋಮವಾರ, 7 ಏಪ್ರಿಲ್ 2014 (19:06 IST)

PTI
ಲೋಕಸಭೆ ಚುನಾವಣೆಯ ಮೊದಲ ಹಂತದ ಇಂದು ಆಸ್ಸಾಂನ ಐದು ಕ್ಷೇತ್ರಗಳಲ್ಲಿ ಮುಕ್ತಾಯಗೊಂಡಿದ್ದು ಶೇ.75 ರಷ್ಟು ಮತದಾನವಾಗಿದೆ. ತ್ರಿಪುರಾದ ಒಂದು ಕ್ಷೇತ್ರದಲ್ಲಿ ಶೇ.84 ರಷ್ಟು ಮತದಾನವಾಗಿದೆ ಎಂದು ಪ್ರಕಟಿಸಿದೆ.

ಆಸ್ಸಾಂನ ಐದು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸಂಜೆಯ ವೇಳೆಗೆ ಶೇ.72.5 ರಷ್ಟಾಗಿತ್ತು. ಮುಕ್ತಾಯದ ವೇಳೆಗೆ ಶೇ.75ಕ್ಕೆ ತಲುಪುವ ನಿರೀಕ್ಷೆಗಳಿವೆ. ಆದರೆ, ತ್ರಿಪುರಾದಲ್ಲಿ ದಾಖಲೆಯ ಶೇ.84 ರಷ್ಟು ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2009ರಲ್ಲಿ ನಡೆದ ಆಸ್ಸಾಂ ಲೋಕಸಭೆ ಚುನಾವಣೆಯಲ್ಲಿ ಶೇ.69.60 ರಷ್ಟು ಮತದಾನವಾಗಿದ್ದರೇ ತ್ರಿಪುರಾದಲ್ಲಿ ಶೇ.86 ರಷ್ಟಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :