ವೀರಪ್ಪ ಮೊಯ್ಲಿಗೆ ತಲ್ಲಣ: ಎದುರಾಗಿ ನಿಲ್ಲಲಿದ್ದಾರೆ ಕುಮಾರಸ್ವಾಮಿ

PR
PR
ಚಿಕ್ಕಬಳ್ಳಾಪುರ: ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಮೊದಲನೇ ಪಟ್ಟಿಯಲ್ಲಿ ಟಿಕೆಟ್ ನೀಡದಿದ್ದರಿಂದ ಆತಂಕಿತರಾಗಿದ್ದರು. ಆದರೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಅವರು ನಿರಾಳರಾಗಿದ್ದರು. ಮುಖ್ಯಮಂತ್ರಿ ಅವರು ಚಿಕ್ಕಬಳ್ಳಾಪುರದ ಜನತೆಗೆ ಎತ್ತಿನಹೊಳೆ ಯೋಜನೆಯ ಅನುಷ್ಠಾನವನ್ನು ಘೋಷಿಸಿದಾಗ ವೀರಪ್ಪ ಮೊಯ್ಲಿ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗಲೇ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಅವರ ಹೆಸರು ಘೋಷಣೆಯಾಗದಿದ್ದಾಗ ಕೊಂಚ ಆತಂಕಿತರಾಗಿದ್ದರು.ನಂತರ ಎರಡನೇ ಪಟ್ಟಿಯಲ್ಲಿ ಘೋಷಣೆಯಾದ ಬಳಿಕ ನಿರಾಳರಾದರು.

PR
PR
ಆದರೆ ಚಿಕ್ಕಬಳ್ಳಾಪುರದಲ್ಲಿ ಅನಾಯಾಸವಾಗಿ ಗೆಲ್ಲಬಹುದು ಎಂದುಕೊಂಡಿದ್ದ ವೀರಪ್ಪ ಮೊಯ್ಲಿ ಅವರಿಗೆ ಇನ್ನೊಂದು ಕಂಟಕ ಎದುರಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಗೆ ಇಳಿಯುವುದು ಅವರಿಗೆ ಬಹುಶಃ ತಲ್ಲಣ ಮೂಡಿಸಿರಬಹುದು. ಮಾರ್ಚ್ 20ರಂದು ಕುಮಾರಸ್ವಾಮಿ ಸ್ಪರ್ಧೆ ಕುರಿತು ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರು ನಿಲ್ಲಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾದರೆ ವೀರಪ್ಪ ಮೊಯ್ಲಿ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎಂದು ಜೆಡಿಎಸ್ ತೀರ್ಮಾನಿಸಿದೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಪರವಾದ ಅಲೆಯನ್ನು ಅದು ಕಂಡುಕೊಂಡಿದೆ. ಕುಮಾರಸ್ವಾಮಿ ಅಲ್ಲಿಗೆ ಸಾಕಷ್ಟು ಬಾರಿ ಸಂಚರಿಸಿದ್ದು, ಜನರ ನಾಡಿಮಿಡಿತವನ್ನು ಅವರು ಅರಿತಿದ್ದಾರೆ. ಈಗ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವುದರಿಂದ ಕುಮಾರಸ್ವಾಮಿ ಅವರಿಗೆ ವಿರುದ್ಧವಾಗಿ ನಿಲ್ಲಲು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...