ಶಿವಮೊಗ್ಗ ಜನರ ಮೇಲೆ ತಮಗೆ ವಿಶ್ವಾಸವಿದೆ, ಖಂಡಿತ ಗೆದ್ದೇಗೆಲ್ತೀನಿ: ಗೀತಾ ಶಿವರಾಜ್ ಕುಮಾರ್

ಮಂಗಳವಾರ, 18 ಮಾರ್ಚ್ 2014 (18:11 IST)

PR
PR
ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಕರೆದು ಪತ್ರಕರ್ತರ ಜತೆ ಸಂವಾದ ನಡೆಸಿದರು.. ನಿನ್ನೆಯಷ್ಟೇ ಜೆಡಿಎಸ್‌ಗೆ ಅಧಿಕೃತವಾಗಿ ಗೀತಾ ಸೇರ್ಪಡೆಯಾಗಿದ್ದು, ಶಿವಮೊಗ್ಗದ ರಾಜಕೀಯ ವಲಯದಲ್ಲಿ ರಾಜ್ ಕುಟುಂಬ ಕುಟುಂಬಕ್ಕೆ ಸಾಥ್ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೀತಾ ತಾವು ಚುನಾವಣೆಯಲ್ಲಿ ಗೆದ್ದರೆ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತುನೀಡುವುದಾಗಿ ಹೇಳಿದರು. ತಮಗೆ ತಮ್ಮನ ಚುನಾವಣೆಯಲ್ಲಿ ಕೂಡ ಪ್ರಚಾರ ಮಾಡಿದ ಅನುಭವವಿದೆ.

ತಂದೆ ಮಾಡಿದ ಕೆಲಸಗಳೇ ತಮಗೆ ಆಶೀರ್ವಾದವಾಗಲಿದೆ ಎಂದು ಗೀತಾ ಹೇಳಿದರು. ಸಂವಾದದಲ್ಲಿ ಗೀತಾ ಜತೆ ಶಿವಣ್ಣ ಉಪಸ್ಥಿತರಿದ್ದರು. ದೇವೇಗೌಡರ ಬಗ್ಗೆ ತಮಗೆ ತುಂಬಾ ಗೌರವವಿದೆ ಎಂದು ಗೀತಾ ಹೇಳಿದರು. ತಾವು ಚುನಾವಣೆಯಲ್ಲಿ ಗೆದ್ದರೆ ತಂದೆ ಮಾಡಿದ ಕೆಲಸಗಳನ್ನು ಮುಂದುವರಿಸುವೆ ಎಂದು ಹೇಳಿದರು. ತಂದೆಯ ಕನಸುಗಳನ್ನು ನಾನು ನೆರವೇರಿಸಿ ಶಿವಮೊಗ್ಗದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಗೀತಾ ಹೇಳಿದರು. ಶಿವಮೊಗ್ಗ ಜನರ ಮೇಲೆ ತಮಗೆ ವಿಶ್ವಾಸವಿದೆ. ಖಂಡಿತ ಗೆದ್ದೇಗೆಲ್ತೀನಿ ಎಂದು ಗೀತಾ ವಿಶ್ವಾಸ ವ್ಯಕ್ತಪಡಿಸಿದರು. ಈ ಮಧ್ಯೆ ಮಾತನಾಡಿದ ಶಿವರಾಜ್ ಕುಮಾರ್ ಮಹಿಳೆಯರು ರಾಜಕೀಯಕ್ಕೆ ಬರಬೇಕು,

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗುವ ವಿಚಾರವಾಗಿ ಕುಮಾರ್ ಬಂಗಾರಪ್ಪ ಬೆಂಬಲಿಗರು ಪ್ರತಿಭಟನೆ ಕೈಗೊಂಡಿದ್ದರು. ತಮಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅಂತಿಮ ಹಂತದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಕ್ಕೂ ಸಿದ್ದ ಎಂದು ಕುಮಾರ್ ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...