ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಇಂದು

ನವದೆಹಲಿ, ಬುಧವಾರ, 9 ಏಪ್ರಿಲ್ 2014 (10:49 IST)

ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ನಾಲ್ಕು ಈಶಾನ್ಯ ರಾಜ್ಯಗಳ ಆರು ಸ್ಥಾನಗಳಿಗೆ ಇಂದು ಪ್ರಾರಂಭವಾಗಿದ್ದು, ಬೆಳಿಗ್ಗೆ ಏಳು ಗಂಟೆಯಿಂದ ಮತದಾರರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿರುವ ದ್ರಶ್ಯಗಳು ಕಂಡುಬಂದಿವೆ.

ದ್ವಿತೀಯ ಹಂತದ ಚುನಾವಣೆ ಅಡಿಯಲ್ಲಿ ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿನ ಒಂದೊಂದು ಸ್ಥಾನಕ್ಕೆ ಮತ್ತು ಮೇಘಾಲಯ ಹಾಗೂ ಅರುಣಾಚಲ ಪ್ರದೇಶದಲ್ಲಿನ ಎರಡು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

PTI

*ಅಲ್ಲದೇ ಅರುಣಾಚಲ ಪ್ರದೇಶದ 60 ವಿಧಾನಸಭಾ ಸ್ಥಾನಗಳಲ್ಲಿ, 49 ಸ್ಥಾನಗಳಿಗೂ ಇಂದು ಚುನಾವಣೆ ನಡೆಯುತ್ತಿದೆ.

*ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಲು ಪ್ರಾತಃ ಕಾಲದಿಂದಲೇ ಜನರು ಸಾಲುಗಟ್ಟಿ ನಿಂತಿದ್ದರು.

* ಮಿಜೋರಾಂನ ಒಂದೇ ಒಂದು ಲೋಕಸಭಾ ಕ್ಷೇತ್ರದ ಮತದಾನವನ್ನು ಎಪ್ರೀಲ್ 11ಕ್ಕೆ ಮುಂದೂಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :