ಸಿದ್ದರಾಮಯ್ಯ ಗೋಕರ್ಣದ ಜ್ಯೋತಿರ್ಲಿಂಗದಂತೆ ಯಾರಿಂದಲೂ ಅಲ್ಲಾಡಿಸಲು ಆಗಲ್ಲ: ಇಬ್ರಾಹಿಂ

ಬೆಂಗಳೂರು, ಸೋಮವಾರ, 7 ಏಪ್ರಿಲ್ 2014 (15:18 IST)

PR
ಮುಖ್ಯಮಂತ್ರಿ ಗೋಕರ್ಣದ ಜ್ಯೋತಿರ್ಲಿಂಗದಂತೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಗುಡುಗಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿವೆ. ಮುಂದಿನ ಐದು ವರ್ಷಗಳವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಸಿ.ಎಂ. ಇಬ್ರಾಹಿಂ, ಬಿಜೆಪಿ ಪಕ್ಷ ಭ್ರಷ್ಟಾಚಾರಿಗಳ ಪಕ್ಷ ಎಂದು ಮೂದಲಿಸಿದರು.

ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಂಗಾನಾಚ್ ನಡೆಯುತ್ತಿತ್ತು. ಬಿಜೆಪಿ ಮುಖ್ಯಮಂತ್ರಿಯೇ ಜೈಲಿಗೆ ಹೋಗಿದ್ದರು. ಮಂತ್ರಿಗಳು ಕೂಡಾ ತಾವೇನು ಕಮ್ಮಿ ಎನ್ನುವಂತೆ ಮಂತ್ರಿಗಳು ಕೂಡಾ ಸರದಿಯಲ್ಲಿ ಜೈಲಿನ ಸುಖ ಕಂಡು ಬಂದಿದ್ದರು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ದಲಿತರ, ಶೋಷಿತರ ಬಡವರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಬಿಜೆಪಿ ಪಕ್ಷ ಕೇವಲ ಕೋಮುವಾದ, ಉದ್ಯಮಿಗಳ ಓಲೈಕೆಯ ಪಕ್ಷವಾಗಿದೆ ಎಂದು ಸಿ.ಎಂ.ಇಬ್ರಾಹಿಂ ಟೀಕಿಸಿದ್ದಾ ರೆ.ಇದರಲ್ಲಿ ಇನ್ನಷ್ಟು ಓದಿ :