ಸೋನಿಯಾ ಗಾಂಧಿ ವಿಶ್ವದ ಆರನೇ ಶ್ರೀಮಂತ ಮಹಿಳೆಯಾಗಲು ಹೇಗೆ ಸಾಧ್ಯ?: ಮನೇಕಾ ಗಾಂಧಿ

ಬರೇಲಿ, ಶನಿವಾರ, 22 ಮಾರ್ಚ್ 2014 (13:16 IST)

PTI
ಸಹೋದರ ರಾಹುಲ್ ಗಾಂಧಿ ವಿರುದ್ಧ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಬಿಜೆಪಿ ಮುಖಂಡ ವರುಣ್ ಗಾಂಧಿ ಹೇಳಿರಬಹುದು. ಆದರೆ, ತಾಯಿ ಮನೇಕಾ ಗಾಂಧಿ ಸೋನಿಯಾ ಗಾಂಧಿ ವಿರುದ್ಧ ಗುಡುಗಿ ಅವರು ಜಗತ್ತಿನ ಶ್ರೀಮಂತರಲ್ಲಿ ಆರನೇ ಸ್ಥಾನ ಹೇಗೆ ಪಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಅನೋಲಾ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಮನೇಕಾ ಗಾಂಧಿ,ವಿವಾಹದ ಸಂದರ್ಭದಲ್ಲಿ ವರದಕ್ಷಿಣೆಯನ್ನು ತರದ ಮಹಿಳೆಯೊಬ್ಬಳು ಅದು ಹೇಗೆ ವಿಶ್ವದಲ್ಲಿಯೇ ಆರನೇ ಶ್ರೀಮಂತ ಮಹಿಳೆಯಾಗಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ಸೋನಿಯಾ ಗಾಂಧಿ ವಿವಾಹವಾಗಿ ಭಾರತಕ್ಕೆ ಬಂದಾಗ ದೇಶದ ಜನತೆ ಪ್ರೀತಿಯನ್ನು ನೀಡಿದ್ದಲ್ಲದೇ ಗೌರವಿಸಿದ್ದಾರೆ. ವಿದೇಶಿ ಮಾಧ್ಯಮಗಳ ಪ್ರಕಾರ ಸೋನಿಯಾ ಗಾಂಧಿ ವಿಶ್ವದ ಆರನೇ ಶ್ರೀಮಂತ ಮಹಿಳೆಯರಲ್ಲಿ ಸ್ಥಾನ ಪಡೆದಿದ್ದಾರೆ. ಅದು ಹೇಗೆ ಸಾಧ್ಯ. ಹಣದ ಮೂಲ ಯಾವುದು? ಯುಪಿಎ ಸರಕಾರ ತನ್ನ ಅವಧಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರಕಾರ ಶಾಲೆಗಳು, ರಸ್ತೆಗಳು, ವಿದ್ಯುತ್ ಯೋಜನೆಗಳಿಗಾಗಿ ಮೀಸಲಿಟ್ಟ ಹಣವನ್ನು ಸೋನಿಯಾ ಗಾಂಧಿ ಕೊಳ್ಳೆಹೊಡೆದಿದ್ದಾರೆ. ದೇಶದ ಮಕ್ಕಳ ಭವಿಷ್ಯವನ್ನು ಕತ್ತಲಾಗಿಸಿ ತಮ್ಮ ಮನೆಯನ್ನು ಬೆಳಕಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕಿ ಮನೇಕಾ ಗಾಂಧಿ ಗುಡುಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...