ಸೋನಿಯಾ ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿಯ ಏಜೆಂಟ್: ಬಿಜೆಪಿ ಬುಕ್‌ಲೆಟ್

ನವದೆಹಲಿ , ಬುಧವಾರ, 2 ಏಪ್ರಿಲ್ 2014 (17:42 IST)

ಹರಿಯಾಣಾದ ಸಿರ್ಸಾದಲ್ಲಿ ಬಿಜೆಪಿ 10 ಪುಟಗಳ ಬುಕ್‌ಲೆಟ್‌ನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಬಹಿರಂಗವಾಗಿ ಟೀಕಿಸಲಾಗಿದೆ. ಸೋನಿಯಾ ರಷ್ಯಾದ ಸ್ಪಾ ಏಜೆನ್ಸಿ ಕೆಜಿಬಿಯ ಏಜೆಂಟ್ ಎಂದು ಬುಕ್‌ಲೆಟ್‌ನಲ್ಲಿ ಆರೋಪಿಸಲಾಗಿದೆ. ಅಲ್ಲದೇ ಹೆಸರು, ಶೈಕ್ಷಣಿಕ ಅರ್ಹತೆ, ಕೆಲಸ ಸೇರಿದಂತೆ ಅವರ ರುಜುವಾತುಗಳನ್ನು ಇದರಲ್ಲಿ ಪ್ರಶ್ನೆ ಮಾಡಲಾಗಿದೆ.

PTI

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ, ಪುಸ್ತಕದಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರದ 10 ವರ್ಷ ದೀರ್ಘಾವಧಿಯ ಆಡಳಿತದಲ್ಲಿ ನಡೆದ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಾಣಿಸಿಕೊಂಡಿರುವ ಹಲವಾರು ಇತರ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಕೂಡ ನಮೂದಿಸಲಾಗಿದೆ.


ಬುಕ್‌ಲೆಟ್ ಯುಪಿಎ ಅಧ್ಯಕ್ಷೆ ಸೋನಿಯಾ ಅವರನ್ನು ಪ್ರಧಾನ ಗುರಿಯನ್ನಾಗಿಸಿಕೊಂಡಿದೆ. ಅವಳ ಬುಕ್‌ಲೆಟ್‌ನ ಮುಖಪುಟದಲ್ಲಿ ಅವರ ಚಿತ್ರವಿದ್ದು, ಅದರ ಮೇಲೆ 'ಪ್ರಧಾನ ಸಂಚುಗಾರ' ಎಂದು ಆರೋಪಿಸಲಾಗಿದೆ.

ಮನಮೋಹನ್ ಸಿಂಗ್, ಶೀಲಾ ದಿಕ್ಷೀತ್ ಮುಂತಾದ ಕಾಂಗ್ರೆಸ್ ನಾಯಕರನ್ನು ಬುಕ್‌ಲೆಟ್‌ನಲ್ಲಿ ಹೆಸರಿಸಿದ್ದು 10 ವರ್ಷಗಳಲ್ಲಿ 18 ಹಗರಣಗಳಲ್ಲಿ ಭಾಗಿಯಾಗಿರುವ, ಇವರು 2011ರವರೆಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :