ಸೋನಿಯಾ ವಿರುದ್ಧದ ಕಣದಿಂದ ಹಿಂದೆ ಸರಿದ ಆಪ್ ಅಭ್ಯರ್ಥಿ

ಲಖನೌ, ಮಂಗಳವಾರ, 8 ಏಪ್ರಿಲ್ 2014 (12:19 IST)

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಕಣಕ್ಕಿಳಿದಿದ್ದ ಆಪ್ ಪಕ್ಷದ ಅಭ್ಯರ್ಥಿ ನಿವೃತ್ತ ನ್ಯಾಯವಾದಿ ಫಕ್ರುದ್ದೀನ್, ಸ್ಪರ್ಧೆಯಿಂದ ಹಿಂದೆ ಸರಿಯುವುದರ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಒಂದು ದೊಡ್ಡ ಆಘಾತ ನೀಡಿದ್ದಾರೆ ಎಂದು ವರದಿಯಾಗಿದೆ.

PTI

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಇದನ್ನು ಖಚಿತಪಡಿಸಿದೆ.

ಸುದ್ದಿಯನ್ನು ದೃಢಪಡಿಸಿದ ಪಕ್ಷದ ಮೂಲಗಳು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮಾಜಿ ಹೈಕೋರ್ಟ್ ನ್ಯಾಯಾಧೀಶರು ಚುನಾವಣೆಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಜಸ್ಟೀಸ್ ಫಕ್ರುದ್ದೀನ್, ಲೋಕಸಭಾ ಚುನಾವಣೆಗೆ ಲಭ್ಯರಿಲ್ಲ ಎಂದು ಆಪ್ ನ ರಾಜ್ಯ ವಕ್ತಾರ ವೈಭವ್ ಮಹೇಶ್ವರಿ ತಿಳಿಸಿದ್ದಾರೆ

ಪಕ್ಷ ಈಗ ಸಾಮಾಜಿಕ ಕಾರ್ಯಕರ್ತೆ ಅರ್ಚನಾ ಶ್ರೀವಾಸ್ತವರನ್ನು , ಸೋನಿಯಾ ಗಾಂಧಿ ವಿರುದ್ಧ ಆಖಾಡಕ್ಕಿಳಿಸಲು ನಿರ್ಧರಿಸಿದೆ.

ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಪ್ ಕವಿ ಪರಿವರ್ತಿತ ರಾಜಕಾರಣಿ ಕುಮಾರ್ ವಿಶ್ವಾಸ್‌ರವರನ್ನು ಕಣಕ್ಕಿಳಿಸಿದೆ.

ಅಮೇಥಿಯಿಂದ ಬಿಜೆಪಿಯಿಂದ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಅಜಯ್ ಅಗರ್ವಾಲ್ ಸೋಮವಾರ ತನ್ನ ನಾಮಪತ್ರ ಸಲ್ಲಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :