ಹರ್ಯಾಣಾದಲ್ಲಿ ಅರವಿಂದೇ ಕೇಜ್ರಿವಾಲ್ ರೋಡ್‌ ಶೋ: ಪ್ರತಿಭಟನೆ

ಫರೀದಾಬಾದ್, ಶನಿವಾರ, 22 ಮಾರ್ಚ್ 2014 (15:57 IST)

PTI
ಹರ್ಯಾಣದ ಫರೀದಾಬಾದ್‌ನಲ್ಲಿ ರೋಡ್ ಶೋ ಮಾಡುತ್ತಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸ್ಥಳೀಯರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಆಪ್ ಅಭ್ಯರ್ಥಿ ಪುರುಷೋತ್ತಮ್ ಡಗರ್ ಜತೆಗೆ ಕೇಜ್ರಿವಾಲ್ ಸೆಕ್ಟರ್ 37 ಮಾರ್ಕೆಟ್‌ನಿಂದ ರೋಡ್ ಶೋ ಆರಂಭಿಸಿದ್ದಾರೆ. ಕೇಜ್ರಿವಾಲ್ ತಮ್ಮ ಬೆಂಬಲಿಗರೊಂದಿಗೆ ಫರೀದಾಬಾದ್‌ಗೆ ತಲುಪಿದಾಗ, ಅಲ್ಲಿನ ಸ್ಥಳೀಯರು ಕಪ್ಪು ಧ್ವಜ ಪ್ರದರ್ಶಿಸಿ ಆಪ್ ವಿರುದ್ಧ ಘೋಷಣೆ ಕೂಗಿದ್ದಾರೆ.

ಕೇಜ್ರಿವಾಲ್ ಅವರಿಗೆ ಕಪ್ಪು ಧ್ವಜ ಪ್ರದರ್ಶಿಸುವುದು ನಮ್ಮ ದೇಶದಲ್ಲಿ ಹೊಸತೇನೂ ಅಲ್ಲ. ನಮ್ಮ ವಿರೋಧಿ ಪಕ್ಷಗಳಿಗೂ ಕಪ್ಪು ಬಾವುಟ ತೋರಿಸುತ್ತಾರೆ. ಕೇಜ್ರಿವಾಲ್ ಮಾತ್ರ ನಮ್ಮ ದೇಶವನ್ನು ಮುನ್ನಡೆಸಬಲ್ಲರು ಎಂದು ಆಪ್ ಬೆಂಬಲಿಗರು ಹೇಳಿದ್ದಾರೆ.

ಇಂದು ಫರೀದಾಬಾದ್ ಮತ್ತು ಗುರ್‌ಗಾಂವ್‌ನ ವಿವಿಧ ಪ್ರದೇಶಗಳಲ್ಲಿ ಕೇಜ್ರಿವಾಲ್‌ರ ರೋಡ್ ಶೋ ನಡೆಯಲಿದ್ದು, ಭಾನುವಾರ ಮಧ್ಯಾಹ್ನದ ವರೆಗೆ ಇದು ಮುಂದುವರಿಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...