Widgets Magazine

ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ಮುತಾಲಿಕ್ ಸ್ಪರ್ಧೆ ಖಚಿತ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧೆ ಮಾಡುವುದು ಖಚಿತ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಸ್ವಲ್ಪ ಹೊತ್ತಿನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಮುತಾಲಿಕ್ ನೇತೃತ್ವದಲ್ಲಿ ನಡೆದ ಶ್ರೀರಾಮಸೇನೆ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮುತಾಲಿಕ್ ಅವರನ್ನು ರಾಜ್ಯ ಘಟಕ ಬಿಜೆಪಿಗೆ ಸೇರಿಸಿಕೊಂಡ ಬಳಿಕ ಬಿಜೆಪಿ ಹೈಕಮಾಂಡ್ ಅವರ ಸೇರ್ಪಡೆಯನ್ನು ಕೈಬಿಟ್ಟು ಮತ್ತೆ ಹೊರಹಾಕಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಪ್ರಮೋದ್ ಮುತಾಲಿಕ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿದರು.ನನ್ನದು ಸ್ವಚ್ಛ ಜೀವನ, ಶುದ್ಧ ವ್ಯಕ್ತಿತ್ವ, ನನ್ನ ತಂದೆಯ ಮುಖ ನೋಡೋದಕ್ಕೂ ನನಗೂ ಅವಕಾಶ ಆಗಲಿಲ್ಲ. ಸಮಾಜಕ್ಕಾಗಿ ನನ್ನ ಜೀವನ ತ್ಯಾಗ ಮಾಡಿದ್ದೇನೆ.


ಇದರಲ್ಲಿ ಇನ್ನಷ್ಟು ಓದಿ :