10 ವರ್ಷಗಳಲ್ಲಿ ಕಾಂಗ್ರೆಸ್ ದಶಲಕ್ಷ ಕೋಟಿ ರೂ ಭ್ರಷ್ಟಾಚಾರ ಮಾಡಿದೆ: ರಾಜನಾಥ್ ಸಿಂಗ್

ನವದೆಹಲಿ, ಬುಧವಾರ, 2 ಏಪ್ರಿಲ್ 2014 (11:04 IST)

ಕೇಂದ್ರದ ಕಾಂಗ್ರೆಸ್ ಸರಕಾರದ ಮೇಲೆ ಹರಿಹಾಯ್ದಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ದಶಲಕ್ಷ ಕೋಟಿ ರೂ ಮಾಡಿದೆ ಎಂದು ಆರೋಪಿಸಿದ್ದಾರೆ.

PTI

ಚುನಾವಣೆ ಕುರಿತ ಸಾರ್ವಜನಿಕ ಸಭೆಯನ್ನು ಸಂಬೋಧಿಸುತ್ತಾ, ನ್ಯಾಯಾಲಯವನ್ನು ಅಭಿನಂದಿಸಿದ ಅವರು "ಭ್ರಷ್ಟಾಚಾರ ನಿಗ್ರಹಿಸಲು ಕೋರ್ಟ್ ಅತಿಯಾಗಿ ಪ್ರಯತ್ನಿಸಿದೆ".

"70 ರ ದಶಕದಲ್ಲಿ, 'ಪ್ರತಿ ಗದ್ದೆಯಲ್ಲೂ ನೀರು, ಪ್ರತಿ ಕೈಗೆ ಕೆಲಸ' ಎಂದು ಕಾಂಗ್ರೆಸ್ ಹೇಳಿತ್ತು. ಈ ಘೋಷಣೆಯನ್ನು ಕಾಂಗ್ರೆಸ್ ಪುನರಾವರ್ತಿಸುತ್ತಿದೆ. ಆದರೆ ಯಾರಿಗೂ ಏನು ಸಿಕ್ಕಿಲ್ಲ" ಎಂದು ಹೇಳಿದ್ದಾರೆ.

"40 ಪ್ರತಿಶತ ಕಲ್ಲಿದ್ದಲು ಮತ್ತು 20 ಪ್ರತಿಶತ ಕಬ್ಬಿಣದ ಅದಿರು ಇದೇ ಭೂಮಿಯ ಗರ್ಭದಿಂದ ಹೊರ ತೆಗೆಯಲಾಗಿದೆ. ಆದರೆ ಇಲ್ಲಿ ಅಭಿವೃದ್ಧಿ ನಗಣ್ಯವಾಗಿದೆ".

"ಪಾಕಿಸ್ತಾನದ ಸೈನಿಕರು ನಮ್ಮ ಸೈನಿಕರ ಕತ್ತನ್ನು ಕತ್ತರಿಸಿ ಕೊಂಡೊಯ್ಯುತ್ತಾರೆ. ಇದಕ್ಕಾಗಿ ಪಾಕಿಸ್ತಾನದಲ್ಲಿ ಹಬ್ಬವನ್ನಾಚರಿಸಿದರೆ, ನಮ್ಮ ಸರಕಾರ ಕೈ ಮೇಲೆ ಕೈ ಇಟ್ಟುಕೊಂಡು ಕುಳಿತು ಕೊಳ್ಳುತ್ತದೆ" ಎಂದು ಸರಕಾರವನ್ನವರು ತರಾಟೆಗೆ ತೆಗೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :