20 ಕೋಟಿ ಆಸ್ತಿಯ ಒಡೆಯ ವರುಣ ಗಾಂಧಿ

ಸುಲ್ತಾನಪುರ್, ಬುಧವಾರ, 16 ಏಪ್ರಿಲ್ 2014 (11:42 IST)

ಸುಲ್ತಾನಪುರದಿಂದ ಲೋಕಸಭೆಗೆ ನಾಮಪತ್ರವನ್ನು ಸಲ್ಲಿಸಿದ ಬಿಜೆಪಿ ನಾಯಕ ವರುಣ್ ಗಾಂಧಿ ಅದರ ಜತೆ ಸಲ್ಲಿಸಿದ ಅಫ್‪ಡವಿಟ್‌ನಲ್ಲಿ ತಮ್ಮ ಬಳಿ ಸುಮಾರು 20 ಕೋಟಿ ಆಸ್ತಿ ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ.

PTI

ಅವರು ಸಲ್ಲಿಸಿರುವ ಅಫಿಡವಿಟ್ ಒದಗಿಸಿದ ವಿವರಗಳ ಪ್ರಕಾರ ವರುಣ್, ಒಟ್ಟು ರೂ 19,96 ಕೋಟಿ ಆಸ್ತಿ ಮತ್ತು ಅವರ ಪತ್ನಿ ಯಾಮಿನಿ ರೂ 11,88 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಅವರ ಬ್ಯಾಂಕ್ ಖಾತೆಯಲ್ಲಿ 11 ಕೋಟಿಗಿಂತ ಅಧಿಕ ರೂಪಾಯಿ ಜಮಾ ಆಗಿದ್ದು 3.33 ಕೋಟಿ ಮೌಲ್ಯದ ಸ್ಟಾಕ್ ಬ್ಯಾಂಡ್‌, 31,53 ಲಕ್ಷ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಜೀವ ವಿಮೆಯನ್ನು ಹೊಂದಿದ್ದಾರೆ. ಪತ್ನಿ ಯಾಮಿನಿ ಬ್ಯಾಂಕ್ ಖಾತೆಯಲ್ಲಿ ರೂ 3.63 ಲಕ್ಷ ರೂಪಾಯಿಗಳಿವೆ.

ಬಿಜೆಪಿಯ ಯುವ ನೇತಾರನ ಬಳಿ ಒಂದು ಗನ್, ಒಂದು ಬಂದೂಕು ಮತ್ತು ಒಂದು ಪಿಸ್ತೂಲ್ ಇದ್ದು, ದೆಹಲಿಯಲ್ಲಿ ಸ್ವಂತ ಮನೆ ಇದೆ. ಆದರೆ ಅವರ ಬಳಿ ಕಾರಿಲ್ಲ.

4.15 ಕೋಟಿ ರೂ ಗಳನ್ನು ಎಲ್ಲೋ ಒಂದು ಕಡೆ ಅಡ್ವಾನ್ಸ್ ನೀಡಿದ್ದಾಗಿ ತಮ್ಮ ಅಫಿಡವಿಟ್‌ಲ್ಲಿ ಹೇಳಿರುವ ಅವರು ತಾವು ಸಾಲವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

ವರುಣ್, 1334,5 ಗ್ರಾಂ ಚಿನ್ನ ಮತ್ತು 113,78 ಕೆಜಿ ಬೆಳ್ಳಿಯನ್ನು ಹೊಂದಿದ್ದು, 2009 ರಿಂದ ಅವರು ಚಿನ್ನ - ಬೆಳ್ಳಿಯನ್ನು ಖರೀದಿಸಿಲ್ಲ. ತಮ್ಮ ಬಳಿ ಕೃಷಿ ಭೂಮಿ ಅಥವಾ ಪೂರ್ವಜರ ಆಸ್ತಿಯಿಲ್ಲ ಎಂದು ಅವರು ಘೋಷಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...