2002 ಗಲಭೆಗೆ ಸಂಬಂಧಿಸಿದಂತೆ ಮೋದಿ ಕ್ಷಮೆ ಕೇಳುವ ಅಗತ್ಯವಿಲ್ಲ: ಜೇಟ್ಲಿ 2002, ಗಲಭೆ, ಮೋದಿ, ಕ್ಷಮೆ, ಅಗತ್ಯವಿಲ್ಲ, ಜೇಟ್ಲಿ

ನವದೆಹಲಿ, ಮಂಗಳವಾರ, 1 ಏಪ್ರಿಲ್ 2014 (18:43 IST)

ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕ್ಷಮೆ ಕೇಳುವ ಅಗತ್ಯವಿಲ್ಲ. ಆ ಮೂಲಕ ನಕಲಿ ಪ್ರಚಾರ ಪಡೆಯುವ ಅಗತ್ಯ ಅವರಿಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.

PTI

ಗುಜರಾತ್ ಗಲಭೆ ಕುರಿತಂತೆ ಕ್ಷಮೆ ಕೋರಿ ಎಂದು ಒತ್ತಾಯಿಸುವವರು ಗಲಭೆಯಲ್ಲಿ ಮೋದಿ ಪಾತ್ರವಿತ್ತು ಎನ್ನುವುದನ್ನು ಸಾಬೀತುಪಡಿಸುವ ಹುನ್ನಾರವನ್ನಿಟ್ಟು ಕೊಂಡಿದ್ದಾರೆ. ಒಂದು ವೇಳೆ ನಿಜವಾಗಿ ಮೋದಿ ತಪ್ಪು ಮಾಡಿದ್ದಲ್ಲಿ ಯಾಕೆ ಕ್ಷಮೆ ಕೋರಬೇಕು. ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ವಿದೇಶಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಜೇಟ್ಲಿ ನಕಲಿ ಪ್ರಚಾರಕ್ಕೆ ಪ್ರತಿಯಾಗಿ ಮೋದಿ ಕ್ಷಮೆ ಕೇಳುವ ಅಗತ್ಯವಿಲ್ಲ. ಅಭಿವ್ಯಕ್ತಿಯ ಹೆಸರಿನಲ್ಲಿ ವ್ಯಾಜ್ಯಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಆದರೆ, ಗುಜರಾತ್ ಹಿಂಸೆ ಬಗ್ಗೆ ಖಂಡಿತವಾಗಿಯೂ ಮೋದಿ "ಕಾಳಜಿ" ಹೊಂದಿದ್ದಾರೆ ಮತ್ತು ಗಲಭೆಗಳು ಪುನರಾವರ್ತಿಸದಂತೆ ತಡೆಯಲು ಸ್ಥಳದಲ್ಲಿ ಸುವ್ಯವಸ್ಥೆ ತರಲು ಬಯಸುತ್ತಾರೆ ಎಂದರು.

"ಜೇಟ್ಲಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಮುಸ್ಲಿಮರು ಸೇರಿದಂತೆ ಎಲ್ಲಾ ಗುಜರಾತಿಗಳು, ಮೋದಿಯವರ ಆಡಳಿತದಲ್ಲಿ ಏಳಿಗೆಯನ್ನು ಕಂಡಿದ್ದಾರೆ. ಕ್ಷಮೆಯ ಬೇಡಿಕೆಯುಳ್ಳ ಧ್ವನಿಗಳು ರಾಜ್ಯದ ಒಳಗಿನಿಂದ ಕೇಳಿಬರುತ್ತಿಲ್ಲ. ಈ ರೀತಿಯ ಬೇಡಿಕೆಗಳು ಕೇವಲ ನಕಲಿ ಪ್ರಚಾರಕರ ಕಡೆಯಿಂದ ಬರುತ್ತಿದೆ" ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :