Widgets Magazine

ಆಂಧ್ರ ಲೋಕಸಭೆ ಚುನಾವಣೆಯಲ್ಲಿ ಝಣ, ಝಣ ಕಾಂಚಾಣದ ಸದ್ದು

ಹೈದರಾಬಾದ್| guna| Last Modified ಬುಧವಾರ, 23 ಏಪ್ರಿಲ್ 2014 (20:43 IST)
ಆಂಧ್ರದಲ್ಲಿ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದ್ದು, ಝಣ ಝಣ ಕಾಂಚಾಣ ಸದ್ದು ಮಾಡುತ್ತಿದೆ. ಇದುವರೆಗೆ 110 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ದೇಶದಲ್ಲಿ ಜಪ್ತಿ ಮಾಡಿದ ಹಣದ ಪ್ರಮಾಣದಲ್ಲಿ ಅರ್ಧದಷ್ಟು ಹಣ ಆಂಧ್ರ ಚುನಾವಣೆ ಕಣದಲ್ಲಿತ್ತು.

ಸೀಮಾಂಧ್ರ ಕಣದಲ್ಲಿ ಒಟ್ಟು 333 ಅಭ್ಯರ್ಥಿಗಳು ಕಣದಲ್ಲಿದ್ದು, ನಾಮಪತ್ರ ಪಡೆಯಲು ಇಂದು ಅಂತಿಮ ದಿನವಾಗಿದೆ. ಎಲ್ಲ ಅಭ್ಯರ್ಥಿಗಳು ಹಣ ಹಂಚಿಕೆಯಲ್ಲಿ ಭರ್ಜರಿಯಾಗಿ ತೊಡಗಿರುವ ನಡುವೆ ಸೀಮಾಂಧ್ರದಲ್ಲಿ ಮೇ 7 ರಂದು ಮತದಾನವಾಗಿದ್ದರೆ, ತೆಲಂಗಾಣದಲ್ಲಿ ಏಪ್ರಿಲ್ 30ರಂದು ಮತದಾನ ನಡೆಯಲಿದೆ ಎಂದು ಆಂಧ್ರ ಚುನಾವಣೆ ಆಯುಕ್ತ ಬನ್ವರಿಲಾಲ್ ಹೇಳಿಕೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :