ಮೋದಿಯನ್ನು ನಾನ್ಯಾಕೆ ಅಭಿನಂದಿಸಲಿ: ಲಾಲು ಯಾದವ್ ಕಿಡಿ

ಪಾಟ್ನಾ, ಶುಕ್ರವಾರ, 16 ಮೇ 2014 (19:02 IST)

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಸಿದ್ದತೆ ನಡೆಸುತ್ತಿರುವಂತೆ ಅವರ ಗೆಲುವಿಗೆ ನಾನು ಅಭಿನಂಧಿಸುವುದಿಲ್ಲ. ನಾನು ಅಂತಹ ಅವಕಾಶವಾದಿಯಲ್ಲ ಎಂದು ಕೇಂದ್ರದ ಮಾಜಿ ರೈಲ್ವೆ ಸಚಿವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ. 
 
ಲೋಕಸಭೆ ಚುನಾವಣೆ ಫಲಿತಾಂಶ ಎನ್‌ಡಿಎ ಪರ ಪ್ರಕಟವಾಗುತ್ತಿದ್ದಂತೆ ಶತ್ರು ಪಾಳಯದಲ್ಲಿದ್ದ ಪ್ರಧಾನಿ ಮನಮೋಹನ್ 
 
ಸಿಂಗ್, ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಆದರೆ, ಲಾಲು ಮಾತ್ರ ನಾನ್ಯಾಕೆ ಮೋದಿಯನ್ನು ಅಭಿನಂದಿಸಲಿ ಎಂದು ರಾಗ ತೆಗೆದಿದ್ದಾರೆ.    
 
 
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಮೋದಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.  

 
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಟುಕನಂತೆ. ಇತನನ್ನು ನೋಡಿ ಕಟುಕರು ನಾಚಿಕೊಳ್ಳುತ್ತಾರೆ. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಬೇಕೆ ಎಂದು ಚುನಾವಣೆ ಪ್ರಚಾರದಲ್ಲಿ ಲಾಲು ಗುಡುಗಿದ್ದರು.  
 
 
ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ಡಿದೇವಿ, ಪುತ್ರಿ ಮೀಸಾ ಭಾರ್ತಿ ಸರಣ್ ಮತ್ತು ಪಾಟಲಿಪುತ್ರ ಲೋಕಸಭೆ ಕ್ಷೇತ್ರಗಳಿಂದ ಸೋಲನುಭವಿಸಿದ್ದಾರೆ 
 
 
ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

http://elections.webdunia.com/karnataka-loksabha-election-results-2014.htm
 

 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಸೋಲಿನ ಹೊಣೆಗಾರಿಕೆ ಹೊತ್ತ ಸೋನಿಯಾ-ರಾಹುಲ್ ಗಾಂಧಿ

ಲೋಕಸಭಾ ಚುನಾವಣೆಯಲ್ಲಿ ಅತಿ ಕಳಪೆ ಪ್ರದರ್ಶನದ ಹೊಣೆಗಾರಿಕೆಯನ್ನು ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ...

news

ಸಿದ್ದುಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ: ಬಿಜೆಪಿ

ಧಾರವಾಡ: ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಲಿ ಎಂದು ...

news

ಭಾರತದ ಯಶಸ್ಸನ್ನು ಮರಳಿ ಬರೆಯುವ ಅವಕಾಶ ಬಂದಿದೆ: ರಾಜನಾಥ್

ನವದೆಹಲಿ: 2014ರ ಮಹತ್ತರ ಚುನಾವಣೆಯಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿರುವ ಬಿಜೆಪಿ ದೇಶದ ಜನತೆಗೆ ಅಭಿನಂದನೆ ...

ಸಿದ್ದುಗೆ ತವರಿನಲ್ಲೇ ಮುಖಭಂಗ: ಬಿಜೆಪಿ ಅಭ್ಯರ್ಥಿಗೆ ಗೆಲುವು

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪತ್ರಕರ್ತ ಪ್ರತಾಪ್ ಸಿಂಹ್ ಅವರು ಹಾಲಿ ಸಂಸದ, ಕಾಂಗ್ರೆಸ್ ...