ಲೋಕಸಭೆ ಚುನಾವಣೆ: ಮತ ಎಣಿಕೆಗಾಗಿ ಪರದಾಡುತ್ತಿರುವ ಸಿಬ್ಬಂದಿ

ಬೆಂಗಳೂರು, ಶುಕ್ರವಾರ, 16 ಮೇ 2014 (11:28 IST)

ಪ್ರತಿ 5 ನಿಮಿಷಕ್ಕೆ ಒಂದು ಸುತ್ತಿನ ಮತ ಎಣಿಕೆ ಮುಗಿಯುತ್ತದೆ. ಆದರೆ ಫಲಿತಾಂಶ ಬೇಗ ಸಿಗುವುದಿಲ್ಲ. ಪ್ರತಿ ಸುತ್ತಿನ ಫಲಿತಾಂಶ ಸಿಗಲು ಕನಿಷ್ಠ 15 ನಿಮಿಷ ಬೇಕಾಗುತ್ತದೆ. ಮತ ಎಣಿಕೆ ಸಿಬ್ಬಂದಿ ಫಲಿತಾಂಶ ತಿಳಿದ ಬಳಿಕ ಎಣಿಕೆ ಸಹಾಯಕರು ಮತಗಳನ್ನು ವಿವಿಧ ಹಂತಗಳಲ್ಲಿ, ಅನೇಕ ನಮೂನೆಗಳಲ್ಲಿ ದಾಖಲಿಸಬೇಕಾಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
 
 
 ಆರಂಭಿಕ ಸಿದ್ಧತೆ ಹೇಗೆ?
 
 ಒಂದು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 14 ಟೇಬಲ್ ಜೋಡಿಸಲಾಗಿರುತ್ತದೆ.
 
ಪ್ರತಿ ಟೇಬಲ್ನಲ್ಲೂ ಎಣಿಕೆ ಸಹಾಯಕ, ಎಣಿಕೆ ಮೇಲ್ವಿಚಾರಕ ಹಾಗೂ ಒಬ್ಬ ಮೈಕ್ರೋ ವೀಕ್ಷಕ ಸೇರಿದಂತೆ ಮೂವರು ಎಣಿಕೆ ಮಾಡುತ್ತಾರೆ. 
 
ಎಣಿಕೆ ಆರಂಭಕ್ಕೂ ಮುನ್ನ ಪ್ರತಿ ಟೇಬಲ್ನಲ್ಲೂ ಅಭ್ಯರ್ಥಿಗಳ ಪಟ್ಟಿ ಒಳಗೊಂಡ ನಮೂನೆ 17ಸಿ ಇರುತ್ತದೆ. ಪಕ್ಕದಲ್ಲೇ ಮತಯಂತ್ರ ಇರುತ್ತದೆ. 
 
 
 ಮತಗಳ ವ್ಯತ್ಯಾಸ ಬಂದರೆ?
 
ಎಣಿಕೆ ಸಹಾಯಕ ತಾವು ತೆಗೆದುಕೊಂಡಿರುವ ಮತಯಂತ್ರದಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ಅಂಕಿ ಅಂಶವನ್ನೂ ಪಕ್ಕದಲ್ಲಿ ಇರಿಸಿಕೊಂಡಿರುತ್ತಾರೆ. ನಂತರ ಮತಯಂತ್ರದಲ್ಲಿ ಟೋಟಲ್ ಎಂಬ ಗುಂಡಿ ಒತ್ತಿ ಅಭ್ಯರ್ಥಿಗಳು ಒಟ್ಟಾರೆ ಗಳಿಸಿದ ಮತ ತಿಳಿಯುತ್ತಾರೆ. ಅದನ್ನು ಚಲಾವಣೆಯಾಗಿದ್ದ ಒಟ್ಟು ಮತಗಳಿಗೆ ಹೋಲಿಸುತ್ತಾರೆ. ಅದು ಸಮನಾಗಿರಬೇಕು. ವ್ಯತ್ಯಾಸ ಬಂದರೆ ಚುನಾವಣಾಧಿಕಾರಿ ಗಮನಕ್ಕೆ ಹೋಗುತ್ತದೆ. 
 
 
ಒಂದು ಸುತ್ತಿನ ಎಣಿಕೆ ಎಂದರೇನು?
 
ಟೋಟಲ್ ಗುಂಡಿ ಒತ್ತಿ ಒಟ್ಟಾರೆ ಮತ ತಿಳಿದ ನಂತರ ಎಣಿಕೆ ಸಹಾಯಕರು ರಿಸಲ್ಟ್ ಗುಂಡಿ ಒತ್ತುತ್ತಾರೆ. ಅದನ್ನು ನಮೂನೆ 17ಸಿ ನಲ್ಲಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ದಾಖಲಿಸುತ್ತಾರೆ. ಇದಕ್ಕೆ ಒಂದು ಸುತ್ತಿನ ಎಣಿಕೆ ಎನ್ನಲಾಗುತ್ತದೆ. 
 
 
 ಪ್ರತಿ ಸುತ್ತಿನಲ್ಲೂ ಪರಾಮರ್ಶೆ
 
ಇಲ್ಲಿ 2 ಬಟನ್ಗಳನ್ನು ಒತ್ತುವ ಮೂಲಕ ಫಲಿತಾಂಶವನ್ನು ಕೇವಲ 5 ನಿಮಿಷಗಳಲ್ಲೇ ತಿಳಿಯಬಹುದು. ಆದರೆ ಅದನ್ನು ನಮೂನೆಗಳಲ್ಲಿ ದಾಖಲಿಸಲು ವಿಳಂಬವಾಗುತ್ತದೆ. ಪ್ರತಿ ಸುತ್ತಿನ ಎಣಿಕೆ ಮುಗಿದಾಗಲೂ ಎಣಿಕೆ ಮೇಲ್ವಿಚಾರಕರು ಮತ್ತೊಮ್ಮೆ ಮತಯಂತ್ರದ ಗುಂಡಿಗಳನ್ನು ಒತ್ತಿ ಪರಾಮರ್ಶಿಸುತ್ತಾರೆ. ಇದನ್ನು ಮೈಕ್ರೋ ವೀಕ್ಷಕರು ಗಮನಿಸುತ್ತಿರುತ್ತಾರೆ. ಇಂಥ ಸುತ್ತುಗಳು ಪ್ರತಿ ಟೇಬಲ್ನಲ್ಲೂ 15ರಿಂದ 16ರವರೆಗೂ ನಡೆಯುತ್ತದೆ.
 
 
 ಪ್ರಮಾಣಪತ್ರ ಎಂದರೇನು?
 
ನಮೂನೆ ಎಫ್ 20ಸಿ ಯಲ್ಲಿ ಆಯ್ಕೆಯಾದ, ಅಭ್ಯರ್ಥಿ, ಪಕ್ಷ, ಎಲ್ಲಿಂದ ಸ್ಪರ್ಧಿಸಿದ್ದಾರೆ, ಯಾರನ್ನು ಸೋಲಿಸಿದ್ದಾರೆ ಎಂಬೆಲ್ಲ ವಿವರ ದಾಖಲಿಸಲಾಗುತ್ತದೆ. ಬಳಿಕ ನಮೂನೆ ಎಫ್21ಇ ಎಂಬ ಪತ್ರದಲ್ಲಿ ಗೆದ್ದ ಅಭ್ಯರ್ಥಿಯ ಮತ ಮತ್ತು ವಿವರ ದಾಖಲಿಸಿ ಘೋಷಣೆ ಪತ್ರ ಸಿದ್ಧಪಡಿಸಲಾಗುತ್ತದೆ. ಇದನ್ನು ಚುನಾವಣಾಧಿಕಾರಿ ಅವರು ವಿಜಯೀ ಅಭ್ಯರ್ಥಿಗೆ ನೀಡುತ್ತಾರೆ. 

ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ 

http://elections.webdunia.com/karnataka-loksabha-election-results-2014.htm


http://elections.webdunia.com/Live-Lok-Sabha-Election-Results-2014-map.htmಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಹಾಸನದಲ್ಲಿ ಜೆಡಿಎಸ್ ಖಾತೆ ತೆರೆದ ದೇವೇಗೌಡರು

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಇದುವರೆಗೆ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ ಬಿಜೆಪಿ ...

news

ಜಯಲಲಿತಾ ಕೂಡ ಪ್ರಧಾನಿ ರೇಸ್‌ನಲ್ಲಿ : ಜ್ಯೋತಿಷ್ಯರ ಭವಿಷ್ಯ

ಭಾರತದ ಮುಂದಿನ ಪ್ರಧಾನಿ ಸ್ಥಾನ ಮೋದಿಗೆ ಲಭಿಸಲಿದೆ ಎಂದು ಭವಿಷ್ಯ ನುಡಿದಿರುವ ತಮಿಳುನಾಡಿನ ಜ್ಯೋತಿಷ್ಯರು ...

news

ಚುನಾವಣೆ ಫಲಿತಾಂಶ: ಮೋದಿಯನ್ನು ಅಭಿನಂದಿಸಿದ ರಾಜನಾಥ್ ಸಿಂಗ್

ನವದೆಹಲಿ: ಲೋಕಸಭೆ ಚುನಾವಣೆಯ ಭರ್ಜರಿ ಪ್ರದರ್ಶನದಿಂದ ಸಂತಸಗೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ...

news

ಜೋಷಿ, ಗದ್ದಿಗೌಡರ್ ಹ್ಯಾಟ್ರಿಕ್, ಶ್ರೀರಾಮುಲು, ಖರ್ಗೆಗೆ ಗೆಲುವು

ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಜಯ ಕಾಂಗ್ರೆಸ್ ವಿನಯ್ ಕುಲಕರ್ಣಿ ವಿರುದ್ಧ ...