ಲೋಕಸಭೆ ಚುನಾವಣೆಯಲ್ಲಿ ವಿಷಯಾಧಾರಿತ ಪ್ರಚಾರ ಮಾಡುವಲ್ಲಿ ವಿಫಲವಾಗಿದ್ದರಿಂದ ಹೀನಾಯ ಸೋಲನುಭವಿಸಬೇಕಾಯಿತು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಚುನಾವಣೆಯ ಸೋಲಿನ ಸಂಪೂರ್ಣ ಹೊಣೆಯನ್ನು ಹೊರಲು ಸಿದ್ದವಾಗಿದ್ದೇನೆ. ಜನತೆಯ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಹೊಸದಾಗಿ ಜನಾದೇಶ ಪಡೆಯಲು ವಿಧಾನಸಭೆಯನ್ನು ವಿಸರ್ಜಿಸಲಾಗುವುದು. ನನ್ನ ಜೀವನದಲ್ಲಿಯೇ ಇಂತಹ ಚುನಾವಣೆ ನೋಡಿಲ್ಲ ಎಂದರು. ಪರಸ್ಪರ ವೈಯಕ್ತಿಕ ನಿಂದನೆಯಲ್ಲಿ ಜೆಡಿಯು ಪಕ್ಷದ ಮುಖಂಡರು ಕಾಲ ಕಳೆದಿರುವುದು ಸೋಲಿಗೆ ಮತ್ತೊಂದು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.