ನಮ್ಮ ನಿರೀಕ್ಷೆ ಹುಸಿಯಾಗಿದ್ದು, ದೇಶದ ರಾಜಕೀಯದಲ್ಲಿ ಬದಲಾವಣೆ ಬಯಸಿ ಜನತೆ ಮತ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಯ ಹಿನ್ನಲೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, ದೇಶದಲ್ಲಿ ಬದಲಾವಣೆ ಬಯಸಿ ಪ್ರಜೆಗಳು ಜನಾದೇಶ ನೀಡಿದ್ದಾರೆ. ಜನತೆಯ ತೀರ್ಪನ್ನು ನಾನು ಗೌರವದಿಂದ ಸ್ವಾಗತಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ನೋಡಿ ಜನ ಮತನೀಡಿಲ್ಲ. ದೇಶದ ಹಿತಕ್ಕಾಗಿ ಜನತೆ ಮತ