ದೇಶದ ಅಭಿವೃದ್ಧಿಯ ಹೊಣೆಹೊರಲು ನನ್ನ ಪುತ್ರ ಸಿದ್ದ: ಮೋದಿ ತಾಯಿ

ಗಾಂಧಿನಗರ, ಶುಕ್ರವಾರ, 16 ಮೇ 2014 (12:04 IST)

ಬಿಜೆಪಿ ಮೈತ್ರಿಕೂಟದ ಪಕ್ಷಗಳಿಗೆ ಸರಕಾರ ರಚಿಸಲು ಅಗತ್ಯವಾದ 273 ಕ್ಷೇತ್ರಗಳ ಗೆಲುವಿನ ದಾಖಲೆಯನ್ನು ತಲುಪುತ್ತಿದ್ದಂತೆ ಮೋದಿ ಪ್ರಧಾನಿಯಾಗುವುದು ಖಚಿತವಾಗಿದೆ. ನನ್ನ ಪುತ್ರ ನರೇಂದ್ರ ಮೋದಿ ದೇಶದ ನಾಯಕತ್ವವನ್ನು  ವಹಿಸಲಿದ್ದಾನೆ ಎಂದು ಮೋದಿ ತಾಯಿ ಹೀರಾಬೆನ್ ಸಂತಸ ವ್ಯಕ್ತಪಡಿಸಿದ್ದಾರೆ.      
 
ಗುಜರಾತ್ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿರುವ 63 ವರ್ಷ ವಯಸ್ಸಿನ ನರೇಂದ್ರ ಮೋದಿ, ತಮ್ಮ ತಾಯಿಯನ್ನು ಶೀಘ್ರದಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.  
 
ನರೇಂದ್ರ ಮೋದಿಗೆ ನನ್ನ ಆಶೀರ್ವಾದವಿದೆ. ದೇಶವನ್ನು ಅಭಿವೃದ್ದಿಪಥದತ್ತ ನಡೆಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಮೋದಿ ತಾಯಿ ಹೀರಾಬೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
ನನ್ನ ತಾಯಿ ನೆರೆಮನೆಗಳಲ್ಲಿ ಕೆಲಸದಾಳಾಗಿ ಕಾರ್ಯನಿರ್ವಹಿಸಿ ನನ್ನನ್ನು ಸಲುಹಿದ್ದಾಳೆ. ನಾನು ಮುಖ್ಯಮಂತ್ರಿಯಾಗಿದ್ದರೂ ತಾಯಿ ಹೀರಾಬೆನ್ ಮತಚಲಾಯಿಸಲು ಅಟೋರಿಕ್ಷಾದಲ್ಲಿ ತೆರಳಿದ್ದಳು ಎಂದು ಮೋದಿ ತಮ್ಮ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದರು.      
 

ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ
 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಸ್ಪೀಕರ್ ಆಗಲು ಅಡ್ವಾಣಿ ಒಪ್ಪುವ ಸಾಧ್ಯತೆ

ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಮತ ಎಣಿಕೆಯ ಮುನ್ನಾದಿನವಾದ ನಿನ್ನೆಯಿಂದಲೇ ...

news

ಸುಲ್ತಾನ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಗೆಲುವು

ಸುಲ್ತಾನ್‌ಪುರ: ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರು ಭರ್ಜರಿ ...

news

ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿಗೆ ಭರ್ಜರಿ ಗೆಲುವು

ಫಿಲಿಬಿಟ್: ಉತ್ತರಪ್ರದೇಶದ ಫಿಲಿಬಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಗೆಲುವು ...

ಹಾಸನದಲ್ಲಿ ಜೆಡಿಎಸ್ ಖಾತೆ ತೆರೆದ ದೇವೇಗೌಡರು

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಇದುವರೆಗೆ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ ಬಿಜೆಪಿ ...