ನಾಳೆ ತಮಿಳುನಾಡು, ಪುದುಚೇರಿಯಲ್ಲಿ ಲೋಕಸಭೆ ಚುನಾವಣೆ ಮತದಾನ

ಬುಧವಾರ, 23 ಏಪ್ರಿಲ್ 2014 (19:40 IST)

  ನವದೆಹಲಿ: ಗುರುವಾರ ಲೋಕಸಭೆಗೆ 9ನೇ ಹಂತದ ಚುನಾವಣೆ ನಡೆಯಲಿದ್ದು, 117 ಕ್ಷೇತ್ರಗಳಲ್ಲಿ 18 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. 11 ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುವ ಚುನಾವಣೆಯಲ್ಲಿ 2076 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಉಳಿಯಲಿದೆ.

117 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, ಬಿಜೆಪಿ 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಂಡಿಎಂಕೆಯ ಭದ್ರಕೋಟೆಯನ್ನು ಮುರಿಯಲು ಬಿಜೆಪಿಗೆ ಸಾಧ್ಯವಾಗುವುದೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ತಮಿಳುನಾಡಿನಲ್ಲಿ 39 ಕ್ಷೇತ್ರಗಳಲ್ಲಿ ಮತ್ತು ಪುದುಚೇರಿಯ ಒಂದು ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ದಯಾನಿಧಿ ಮಾರನ್, ಎ.ರಾಜಾ, ಡಿಎಂಕೆ ನಾಯಕ ಟಿ.ಆರ್. ಬಾಲು, ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ, ಡಿಎಂಕೆ ನಾಯಕ ವೈಕೋ ಮತ್ತು ಕೇಂದ್ರ ಸಚಿವ ನಾರಾಯಣಸ್ವಾಮಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ 12 ಮತ್ತು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಚುನಾವಣೆ: ದೇಶಾದ್ಯಂತ 300 ಕೋಟಿ ರೂ ಅಕ್ರಮ ಹಣ ವಶಕ್ಕೆ

ಚುನಾವಣಾ ಆಯೋಗದ ನಿರ್ಬಂಧದ ಹೊರತಾಗಿಯೂ, ರಾಜಕೀಯ ಪಕ್ಷಗಳು ಮದ್ಯ ಮತ್ತು ಹಣದ ಮೂಲಕ ಮತದಾರರಿಗೆ ಆಮಿಷ ...

news

ಮುಸ್ಲಿಮರು ಜಾತ್ಯಾತೀತತೆಯನ್ನು ಬಿಟ್ಟು ಕೋಮುವಾದಿಗಳಾಗಬೇಕು : ಶಾಝಿಯಾ ಇಲ್ಮಿ

ಮುಸ್ಲಿಮರು ಸ್ವಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ಬಿಟ್ಟು ಕೋಮುವಾದಿಗಳಾಗುವುದು ಅಗತ್ಯವಾಗಿದೆ ಎಂದು ಆಪ್ ...

news

ಜೇಬಿನಲ್ಲಿರುವ 500 ರೂ ಮತ್ತು ಹಳೆಯ ಜೀಪ್ ಮಾತ್ರ ನನ್ನ ಆಸ್ತಿ: ಕೇಜ್ರಿವಾಲ್

ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಮತ್ತು ಆಮ್ ಆದ್ಮಿ ಟೋಪಿ ಧರಿಸಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ...

news

ರಾಯ್‌ಬರೇಲಿಯಲ್ಲಿ ಮೋದಿಯ ಅಲೆಯಿಲ್ಲ, ಚಂಡಮಾರುತವಿದೆ : ಬಿಜೆಪಿ

ನೆಹರು -ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗಾಂಧಿ ...