ಬಿಜೆಪಿ ಚುನಾವಣಾ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಮಾತನಾಡಿದ್ದಕ್ಕೆ ಕೆಂಡಾಮಂಡಲವಾದ ಕಾರ್ಯಕರ್ತರೊಬ್ಬರು ಅಡ್ಡಿಪಡಿಸಿದ್ದಾರೆ.ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಈ ಘಟನೆ ನಡೆದಿದೆ. ದೇವೇಗೌಡರ ವಿರುದ್ಧ ಮಾತನಾಡಿದ್ರೆ ಗ್ರಾಮದಿಂದ ಹೊರ ಹೋಗಲ್ಲವೆಂದು ಧಮ್ಕಿ ಹಾಕಲಾಗಿದೆ.ಪ್ರಚಾರ ಮಾಡದಂತೆ ಗ್ರಾಮದಿಂದ ಹೊರಹೋಗಲು ತಾಕೀತು ಮಾಡಲಾಗಿದೆ. ಬಸವರಾಜ್ ನಾಲ್ಕು ಭಾರಿ ಗೆದ್ದು ಏನ್ ಕಿಸಿದಿದ್ದಾನೆಂದು ನಿಂದನೆ ಮಾಡಲಾಗಿದೆ.ಬಿಜೆಪಿ ಅಭ್ಯರ್ಥಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.